ರೀಲ್ಸ್ ಮಾಡುತ್ತಾ ನದಿಗೆ ಹಾರಿದ ಯುವಕ ವಾಪಸ್ ಬರಲೇ ಇಲ್ಲ!
ಮಹಾರಾಷ್ಟ್ರ: ಯುವಜನತೆ ಇದೀಗ ಜನರನ್ನು ಸೆಳೆಯಲು ನಾನಾ ರೀತಿಯ ಕ್ರಿಯಾಶೀಲ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಆದರೆ, ರೀಲ್ಸ್ ಮಾಡುವ ವೇಳೆ ಅಪಾಯವನ್ನು ನಿರ್ಲಕ್ಷಿಸಿ ಯುವಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕ ಕಾರಣವಾಗಿದೆ.
ಇಲ್ಲೊಬ್ಬ ಯುವಕ ರೀಲ್ಸ್ ಮಾಡಲು ನದಿಗೆ ಹಾರಿದ್ದು, ಇದೀಗ ನೀರುಪಾಲಾಗಿದ್ದಾನೆ. ರೀಲ್ಸ್ ನಟನೆಗೆಂದು ನದಿಗೆ ಹಾರಿದ ಯುವಕ ಮರಳಿ ಬರಲೇ ಇಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ನಾಸಿಕ್ನ ಮಾಲೆಗಾಂವ ಪಟ್ಟಣದ ಬಳಿ ಗೀರಣಾ ನದಿಯಲ್ಲಿ ಈ ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ನದಿಗೆ ಯುವಕ ಹಾರಿದ್ದು, ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳಯಾಗುತ್ತಿದ್ದು, ಗೀರಣಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗೆ ಯಾರೂ ಇಳಿಯ ಬಾರದು, ನೀರು ಅಪಾಯದ ಮಟ್ಟಿಕ್ಕಿಂತ ಹೆಚ್ಚಿದೆ ಎಂದು ಸೂಚನೆ ನೀಡಲಾಗಿತ್ತು. ಆದರೆ, ಇದನ್ನು ನಿರ್ಲಕ್ಷಿಸಿ ಯುವಕ ನದಿಗೆ ಹಾರಿದ್ದು, ಇದೀಗ ಅಪಾಯಕ್ಕೆ ತುತ್ತಾಗಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka