ಮಿತಿ ಮೀರುತ್ತಿರುವ ಶಾಲಾ ಶುಲ್ಕ ನಿಯಂತ್ರಿಸಲು ಮಿತೇಶ್ ಕುಮಾರ್ ಜೊತೆಗೆ ಕೈಜೋಡಿಸಿ - Mahanayaka
9:43 AM Thursday 12 - December 2024

ಮಿತಿ ಮೀರುತ್ತಿರುವ ಶಾಲಾ ಶುಲ್ಕ ನಿಯಂತ್ರಿಸಲು ಮಿತೇಶ್ ಕುಮಾರ್ ಜೊತೆಗೆ ಕೈಜೋಡಿಸಿ

right to education
08/05/2021

ಮಂಗಳೂರು: ಇಡೀ ದೇಶವೇ COVID-19 ಎಂಬ ಜಾಗತಿಕ ಮಹಾಮಾರಿಯಿಂದ ನಲುಗುತ್ತಿರುವ ಸಮಯದಲ್ಲಿಯೂ ಮತ್ತು ಖಾಸಗಿ ಶಾಲೆಗಳ ಶುಲ್ಕಗಳ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವರ ನೇರ ಹಸ್ತಕ್ಷೇಪದ ನಂತರವೂ ಭಾರತದಾದ್ಯಂತದ ಖಾಸಗಿ ಶಾಲೆಗಳು ಅಮಾನವೀಯವಾಗಿ ಪೋಷಕರಿಂದ ಭಾರೀ ಶುಲ್ಕ ವಸೂಲಿ ಮಾಡುವುದನ್ನು ಮುಂದುವರೆಸುತ್ತಿವೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸಲು ಮಿತೇಶ್ ಕುಮಾರ್ ಮೂಡುಕೋಣಾಜೆ ಅಭಿಯಾನ ಆರಂಭಿಸಿದ್ದಾರೆ.

ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಪೋಷಕರು ಆರ್ಥಿಕ ದುಸ್ಥಿತಿಯಿಂದಾಗಿ ಅಂತತ್ರ ಸ್ಥಿತಿಯಲ್ಲಿದ್ದಾರೆ. ಖಾಸಗಿ ಶಾಲೆಗಳ ಶಾಲಾ ಶುಲ್ಕ ವಸೂಲಾತಿ ಮಾಫಿಯಾವನ್ನು ತಡೆಗಟ್ಟುವುದು ಈ ಹೊತ್ತಿನ ಆದ್ಯತೆಯಾಗಿದೆ ಎಂದು ಹೇಳಿರುವ ಅವರು, ಶಿಕ್ಷಣ ಮಾಫಿಯಾವನ್ನು ಕೊನೆಗೊಳಿಸಲು, ಮೂಲಭೂತ ಶಿಕ್ಷಣದ ವಾಣಿಜ್ಯೀಕರಣವನ್ನು ನಿಲ್ಲಿಸಲು ಜೊತೆಗೂಡುವಂತೆ ಕರೆ ನೀಡಿದ್ದಾರೆ.

AIPA – ಅಖಿಲ ಭಾರತ ಪೋಷಕರ ಸಂಘವು  “ಅನುದಾನರಹಿತ ಖಾಸಗಿ ಶಾಲೆ (ಶುಲ್ಕ ಸಂಗ್ರಹ ನಿಯಂತ್ರಣ) ಮಸೂದೆ 2021” ಅನ್ನು ತಯಾರಿಸಿದೆ ಮತ್ತು  NPUSPTA – ರಾಷ್ಟ್ರೀಯ ಪದವಿ ಪೂರ್ವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಂಘ ದೊಂದಿಗೆ ಈ ಕರಡು ಮಸೂದೆಯನ್ನು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಗೆ ಮಂಡಿಸಬೇಕೆಂದು ಮತ್ತು ಸಾಧ್ಯವಾದಷ್ಟು ಬೇಗ “ಭಾರತದಲ್ಲಿ ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಏಕ ಶುಲ್ಕ ನೀತಿ” ಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.

#EndTheEducationMafia, #StopCommercializationOfBasicEducation ಹ್ಯಾಶ್ ಟ್ಯಾಗ್ ಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರ ಗಮನವನ್ನು ಸೆಳೆದಿರುವ ಅವರು,  ಇದು ಭಾರತದ ಪ್ರತಿಯೊಂದು ಮನೆ ಮತ್ತು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ವಿಷಯವಾಗಿರುವುದರಿಂದ ದಯವಿಟ್ಟು ಗರಿಷ್ಠ ಜನರನ್ನು ತಲುಪಲು ಸಹಾಯ ಮಾಡಿ ಮತ್ತು ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳಿ ಎಂದು ಹೇಳಿರುವ  ಅವರು, #RegulatePrivateSchoolFeesIndia ಅನುಷ್ಠಾನಕ್ಕೆ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರನ್ನು ಒತ್ತಾಯಿಸಲು ದಯವಿಟ್ಟು ಈ ಅರ್ಜಿಗೆ ಸಹಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಹಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ: https://www.change.org/RegulatePrivateSchoolFeesInIndia

ಇತ್ತೀಚಿನ ಸುದ್ದಿ