24 ಗಂಟೆಗಳಲ್ಲಿ ರೇಖಾ ಕದಿರೇಶ್ ಹತ್ಯೆಯ ಪ್ರಮುಖ ಆರೋಪಿಗಳ ಅರೆಸ್ಟ್

rekha kadiresh
25/06/2021

ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿದ್ದಾರೆ.

ಸಂಚಿನಲ್ಲಿ ಪಾಲ್ಗೊಂಡಿದ್ದ ನಾಲ್ವರು ಆರೋಪಿಗಳನ್ನು  ಶುಕ್ರವಾರ ಬೆಳಗ್ಗೆ ಬಂಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಗಳನ್ನು  ಬಂಧಿಸಲಾಗಿದೆ. ಪ್ರಕರಣದ ಎ1 ಆರೋಪಿ ಸೂರ್ಯ ಹಾಗೂ ಎ2 ಆರೋಪಿ ಲಂಬು ಪೀಟರ್ ಯಾನೆ ಪೀಟರ್ ಹಾಗೂ  ಸ್ಟೀಫನ್ ಬಂಧಿತ ಆರೋಪಿಗಳಾಗಿದ್ದಾರೆ.

ಇನ್ನೂ ಆರೋಪಿಗಳಿಗೆ ಬಲೆ ಬೀಸಿದ್ದ ಕಾಟನ್ ಪೇಟೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಸುಲನಹಳ್ಳಿ ಶನಿ ಮಹಾತ್ಮ ದೇವಸ್ಥಾನದ ಬಳಿಯಲ್ಲಿ ಶರಣಾಗುವಂತೆ ಪೊಲೀಸರು ಆರೋಪಿಗಳಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ವೇಳೆ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಳಿಕ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಇಂದು ಬಂಧನಕ್ಕೊಳಗಾದ ಪೀಟರ್ ಹಾಗೂ ಸೂರ್ಯನನ್ನು ವೈದ್ಯಕೀಯ ತಪಾಸಣೆಗಾಗಿ ಸುಂಕದಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

 

 

ಇದನ್ನೂ ಓದಿ:

ರೇಖಾ ಕದಿರೇಶ್ ಹತ್ಯೆಗೂ ಮುನ್ನ ಸಿಸಿ ಕ್ಯಾಮರ ತಿರುಗಿಸಿಟ್ಟ ದುಷ್ಕರ್ಮಿಗಳು | ಘಟನಾ ಸ್ಥಳದಲ್ಲಿ ಏನು ನಡೆದಿತ್ತು ಗೊತ್ತಾ?

 

ಇದನ್ನೂ ಓದಿ:

ನನ್ನ ಅಮ್ಮನನ್ನು ಗೊತ್ತಿರುವವರೇ ಹತ್ಯೆ ಮಾಡಿದ್ದಾರೆ | ರೇಖಾ ಕದಿರೇಶ್ ಪುತ್ರ ರಾಹುಲ್

ಇತ್ತೀಚಿನ ಸುದ್ದಿ

Exit mobile version