“ರೆಕ್ಕೆಯನ್ನಲ್ಲ, ತಲೆಯನ್ನೇ ತೆಗೆಯುತ್ತೇನೆ” | ನಟ ದರ್ಶನ್ ಗರಂ - Mahanayaka

“ರೆಕ್ಕೆಯನ್ನಲ್ಲ, ತಲೆಯನ್ನೇ ತೆಗೆಯುತ್ತೇನೆ” | ನಟ ದರ್ಶನ್ ಗರಂ

darshan
11/07/2021

ಮೈಸೂರು: ನಟ ದರ್ಶನ್ ಹೆಸರು ದುರುಪಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ನಟ ದರ್ಶನ್ ನರಸಿಂಹರಾಜ ಉಪ ವಿಭಾಗದ ಎಸಿಪಿ ಕಚೇರಿಗೆ ಬಂದಿದ್ದು, ಈ ವೇಳೆ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.

ಯಾರೇ ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಅವರ ರೆಕ್ಕೆಯನ್ನಲ್ಲ, ತಲೆಯನ್ನೇ ತೆಗೆಯುತ್ತೇನೆ ಎಂದು ನಟ ದರ್ಶನ್ ಗುಡುಗಿದ್ದಾರೆ ಎಂದು ವರದಿಯಾಗಿದ್ದು, ನನಗೆ ಯಾರೂ ಬ್ಲ್ಯಾಕ್ ಮೇಲ್ ಮಾಡಿಲ್ಲ, ಆದರೆ ನನ್ನ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ, ಡಿಸಿಪಿ ಪ್ರದೀಪ್ ಗುಂಟೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ ಹಾಗೂ ಯಾರನ್ನೂ ವಿಚಾರಣೆಗೂ ಕರೆದಿಲ್ಲ. ದೂರುದಾರರ ಜೊತೆಗೆ ಕೆಲವರು ಬಂದಿದ್ದರು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಇತ್ತೀಚಿನ ಸುದ್ದಿ