ವೋಡಾಫೋನ್ – ಐಡಿಯಾ ವಿರುದ್ಧ ಕೇಸ್ ದಾಖಲಿಸಿದ ಜಿಯೋ!
ಟೆಲಿಕಾಂ ಕಂಪೆನಿಗಳ ಪ್ರಿಪೇಯ್ಡ್ ರೀಚಾರ್ಚ್ ಪ್ಲಾನ್ ಗಳು ಗಗನಕ್ಕೇರಿರುವ ನಡುವೆಯೇ ಇದೀಗ ಕಂಪೆನಿಗಳ ನಡುವೆ ನೇರ ಗುದ್ದಾಟ ಆರಂಭವಾಗಿದೆ. ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜಿಯೋ ಕಂಪೆನಿ ಇದೀಗ ವೊಡಾಫೋನ್ –ಐಡಿಯಾ ಕಂಪೆನಿಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ.
ಕಳೆದ ವಾರ ಟೆಲಿಕಾಂ ರೆಗ್ಯೂಲೆಟರಿ ಆಫ್ ಇಂಡಿಯಾಗೆ ಜಿಯೋ ಪತ್ರ ಬರೆದಿದ್ದು, ವೋಡಾಫೋನ್ – ಐಡಿಯಾವು ತನ್ನ ಗ್ರಾಹಕರು ಇತರ ನೆಟ್ ವರ್ಕ್ ಗೆ ಪೋರ್ಟ್ ಆಗದಂತೆ ತಡೆಯುತ್ತಿದ್ದು, ಇದರ ಹೊಸ ಪ್ಲಾನ್ ನಿಂದಾಗಿ ಗ್ರಾಹಕರು ಇತರ ನೆಟ್ ವರ್ಕ್ ಗೆ ಪೋರ್ಟ್ ಆಗಲು ನಿರುತ್ಸಾಹ ತೋರಿದ್ದಾರೆ ಎಂದು ಹೇಳಿದೆ.
ವೊಡಾಫೋನ್ - ಐಡಿಯಾ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ತನ್ನ ಎಸ್ ಎಂಎಸ್ ಸೇವೆಯನ್ನು ಪ್ರಸ್ತುತ 149 ರೂಪಾಯಿ ದರದಿಂದ 179 ರೂಪಾಯಿ ಹೆಚ್ಚಿನ ಸುಂಕದ ಯೋಜನೆಗೆ ವರ್ಗಾವಣೆ ಮಾಡಿದೆ. ಅಂದರೆ ಕಡಿಮೆ ಮೊತ್ತದ ಪ್ರಿಪೇಯ್ಡ್ ಪ್ಲಾನ್ ಹೊಂದಿರುವ ವೊಡಾಫೋನ್ - ಇಂಡಿಯಾ ಗ್ರಾಹಕರಿಗೆ ಎಸ್ ಎಂಎಸ್ ಸೇವೆಯೇ ಇರುವುದಿಲ್ಲ. ಹೀಗಾಗಿ ಅವರು ಬೇರೆ ಸೇವೆಗಳಿಗೆ ಹೋಗಲು ಪೋರ್ಟ್ ಎಸ್ ಎಂಎಸ್ ಮಾಡಲು ಸಾಧ್ಯವಾಗುತ್ತಿಲ್ಲ. ಕಡಿಮೆ ಮೊತ್ತದ ರಿಚಾರ್ಜ್ ಹೊಂದಿರುವ ಗ್ರಾಹಕ ಬೇರೊಂದು ನೆಟ್ ವರ್ಕ್ ಸೇವೆಗೆ ಪೋರ್ಟ್ ಆಗಬೇಕಾದರೆ, 179 ರೂಪಾಯಿ ರಿಚಾರ್ಜ್ ಮಾಡಿಸಿ ಬಳಿಕ ಪೋರ್ಟ್ ಆಗಬೇಕು. ಹೀಗಾಗಿ ಗ್ರಾಹಕರು ಇತರ ನೆಟ್ ವರ್ಕ್ ಗಳಿಗೆ ಪೋರ್ಟ್ ಆಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಯೋ ಆರೋಪಿಸಿದೆ.
ವೋಡಾಫೋನ್ – ಐಡಿಯಾ, ಏರ್ಟೆಲ್ ಗಳು ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನ್ನು ಗಗನಕ್ಕೆ ಏರಿಸಿದ್ದು, ಇದೇ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಯೋ ನೆಟ್ ವರ್ಕ್ ಬಳಸಲಿದ್ದಾರೆ ಎಂದು ಜಿಯೋ ನಿರೀಕ್ಷಿಸಿತ್ತು. ಆದರೆ, ವೋಡಾಫೋನ್ – ಐಡಿಯಾವು ತನ್ನ ಕಡಿಮೆ ಪ್ಲಾನ್ ಆಗಿರುವ 179 ರೀಚಾರ್ಜ್ ಗೆ ಎಸ್ ಎಂಎಸ್ ನೀಡಿಲ್ಲವಾದ ಕಾರಣ ಮತ್ತೆ ರೀಚಾರ್ಜ್ ಮಾಡಿ ಪೋರ್ಟ್ ಮಾಡಲು ಗ್ರಾಹಕರು ನಿರುತ್ಸಾಹ ತೋರಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ಜಿಯೋಗೆ ವೋಡಾಫೋನ್ – ಐಡಿಯಾ ತೀವ್ರ ಏಟು ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ
ಒಕ್ಕಲಿಗರ ಸಂಘದ ಚುನಾವಣೆ: ಆಮಿಷ ಒಡ್ಡಿ ಮತಬೇಡುವವರನ್ನು ಬೆಂಬಲಿಸಬೇಡಿ | ಯುವ ಮುಖಂಡ ಸಚಿನ್ ಸರಗೂರು
ವಿವಾದಕ್ಕೆ ಕಾರಣವಾದ ‘ಗರುಡ ಗಮನ ವೃಷಭ ವಾಹನ’ ಚಿತ್ರ | ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಮಾದಪ್ಪನ ಹಾಡು
‘ಫ್ಯಾಶಿಸ್ಟರಿಂದ ಕರ್ನಾಟಕ ರಕ್ಷಿಸೋಣ’ | ಡಿಸೆಂಬರ್ 3ರಂದು ಬೃಹತ್ ಜಾಗೃತಿ ಅಭಿಯಾನ
ಗಲ್ಫ್ ನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ: ದೃಢಪಡಿಸಿದ ಸೌದಿ ಅರೇಬಿಯಾ
‘ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್’: ಹಂಸಲೇಖ ಸಂಯೋಜನೆಯ ಸಂವಿಧಾನ ಗೀತೆ ವೈರಲ್