ರಿಲಯನ್ಸ್ ಟ್ರೆಂಡ್ಸ್ ಫ್ಯಾಷನ್ ಉಡುಪುಗಳ ಹೊಸ ಸಂಗ್ರಹ ಮಾರಾಟ ಶುರು; ಬೆಲೆಗಳು ರೂ.199 ರಿಂದ ಪ್ರಾರಂಭ
ಮುಂಬೈ: ಫ್ಯಾಷನ್ ಉಡುಪುಗಳಿಗೆ ಭಾರತದ ಪ್ರಮುಖ ಮಾರಾಟಗಾರ ಆದ ರಿಲಯನ್ಸ್ ಟ್ರೆಂಡ್ಸ್ ನಿಂದ ಹೊಸ ಆಟಮ್ — ವಿಂಟರ್ ಸಂಗ್ರಹದ ಬಿಡುಗಡೆಯ ಬಗ್ಗೆ ಘೋಷಣೆ ಮಾಡಿದ್ದು, ಮುಂಬರುವ ದಸರಾ ಸೇರಿದಂತೆ ಹಬ್ಭಗಳ ಋತುವಿಗಾಗಿ ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳ ವಿಶಾಲ ಹಾಗೂ ಅದ್ಭುತವಾದ ಶ್ರೇಣಿಯನ್ನು ಇದು ಒಳಗೊಂಡಿದೆ. ರಿಲಯನ್ಸ್ ಟ್ರೆಂಡ್ಸ್ ಈ ಹೊಸ ಸಂಗ್ರಹಗಳ ಮೇಲೆ “ಪ್ರತಿದಿನ ಕಡಿಮೆ ಬೆಲೆಗಳು” ಎಂಬ ಪರಿಕಲ್ಪನೆಯ ಆಫರ್ ನೀಡುತ್ತಿದೆ. ನೀವು ಸ್ಟೋರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಹೀಗೆ ಯಾವ ರೀತಿಯಲ್ಲಿ ಶಾಪಿಂಗ್ ಮಾಡಲು ಬಯಸಿದರೂ ಕಡಿಮೆ ಬೆಲೆಗಳಲ್ಲಿ ಖರೀದಿಸಬಹುದು. ಇನ್ನು ಬೆಲೆಗಳು ರೂ.199 ರಿಂದ ಪ್ರಾರಂಭವಾಗುತ್ತವೆ.
ಸಂಪ್ರದಾಯ ಹಾಗೂ ಆಧುನಿಕತೆಯ ಮಿಶ್ರಣ:
ಪುರುಷರ ಸಂಗ್ರಹದಲ್ಲಿ ಇರುವಂಥದ್ದು ಹೂವು ಅರಳುವುದೂ ಸೇರಿದಂತೆ ಹರಿಯುವ ನದಿ, ಪರ್ವತ ಹೀಗೆ ಪ್ರಕೃತಿಯ ಸೌಂದರ್ಯವನ್ನು ಹಿಡಿದಿಡುವ ಬಣ್ಣ, ವಿನ್ಯಾಸಗಳನ್ನು ಹೊಂದಿದೆ. ಈ ಒಂದೊಂದು ದಿರಿಸು ಸಹ ಒಂದೊಂದು ಚಂದದ ಕಥೆ ಹೇಳುವಂತಿವೆ. ಇವುಗಳನ್ನು ಸೃಜನಶೀಲತೆಯಿಂದ ಆಸ್ಥೆ ವಹಿಸಿ, ಸುಂದರವಾಗಿ ಸಿದ್ಧಗೊಳಿಸಲಾಗಿದೆ. ಇನ್ನು ಮಹಿಳೆಯರ ಸಂಗ್ರಹದಲ್ಲಿ ಇಂದಿನ ಆಧುನಿಕ ಮಹಿಳೆಯರಿಗೆ ಅಂತಲೇ ಮರುರೂಪಿಸಲಾಗಿದೆ. ಈ ಸಂಗ್ರಹವು ಗ್ರಾಹಕರ ವೈವಿಧ್ಯಮಯ ಫ್ಯಾಷನ್ ಆದ್ಯತೆಗಳನ್ನು ಪೂರೈಸುವ ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಗಳ ಮಿಶ್ರಣವನ್ನು ನೀಡುತ್ತದೆ. ಕುರ್ತಾಗಳಲ್ಲೇ ಹಲವು ಬಗೆಯದನ್ನು ನೋಡಬಹುದು. ಪ್ರತಿಯೊಂದು ಸಹ ಫ್ಯಾಷನ್ ಜಗತ್ತಿಗೆ ಏನೋ ಹೇಳಲು ಹೊರಟಿರುವಂತೆ ವಿನ್ಯಾಸಗೊಂಡಿವೆ.
ಅಂದಹಾಗೆ, 2024ರ ಅತಿದೊಡ್ಡ ಟ್ರೆಂಡ್ ಏನು ಗೊತ್ತಾ? ಹೂವಿನ ಚಿತ್ರಗಳು ಹೊಂದಿರುವುದು. ಇದು ಪ್ರಕೃತಿಯ ಸೌಂದರ್ಯದ ಆಚರಣೆಯಾಗಿದೆ. ಶ್ರೀಮಂತ ಬಣ್ಣಗಳಾ — ಗುಲಾಬಿಗಳು, ನೇರಳೆಗಳು, ನೀಲಿ ಮತ್ತಿತರ ಬಣ್ಣಗಳನ್ನು ಕಾಣಬಹುದಾಗಿದೆ.
ಮಕ್ಕಳ ಉಡುಗೆ ಸಂಗ್ರಹದಲ್ಲಿ ಎಲ್ಲ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂಥ ಚಿಟ್ಟೆಗಳು, ಮುಖದ ಮೇಲೆ ನಗು ತರಿಸುವಂಥ ವಿನ್ಯಾಸಗಳು ಇವೆಲ್ಲವುಗಳ ವಿನ್ಯಾಸಗಳು ಇರಲಿವೆ.
ಈ ಹಬ್ಬದ ಋತುವಿನಲ್ಲಿ, ರಿಲಯನ್ಸ್ ಟ್ರೆಂಡ್ಸ್ ನಿಮ್ಮ ನೆಚ್ಚಿನ ಫ್ಯಾಷನ್ ತಾಣವಾಗಲಿ. ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವನ್ನು ಅಳವಡಿಸಿಕೊಳ್ಳಿ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ನೀವು ಈ ಸಂಗ್ರಹದೊಂದಿಗೆ ಆಚರಿಸಿ.
ನಿಮ್ಮ ಹಬ್ಬದ ಶಾಪಿಂಗ್ ಅನ್ನು ಇನ್ನಷ್ಟು ವಿಶೇಷವಾಗಿಸಲು, ರಿಲಯನ್ಸ್ ಟ್ರೆಂಡ್ಸ್ ಹೊಸ ಸಂಗ್ರಹಗಳ ಮೇಲೆ ವಿಶೇಷ ರಿಯಾಯಿತಿಗಳು ನೀಡುತ್ತಿದೆ. ನೀವು ಸ್ಟೋರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಬಯಸುತ್ತೀರಾ? ಹಾಗಿದ್ದರೆ ಅದು ಆನ್ ಲೈನ್ ನಲ್ಲಿಯಾದರೂ ಸರಿ, ಅಥವಾ ನೇರ ಮಳಿಗೆಗೆ ಭೇಟಿ ನೀಡಿಯಾದರೂ ಸರಿ ಶಾಪಿಂಗ್ ಮಾಡಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: