ಶಿಮ್ಲಾದಲ್ಲಿ ಮಸೀದಿಯ 3 ಅನಧಿಕೃತ ಅಂತಸ್ತುಗಳನ್ನು ತೆರವುಗೊಳಿಸಿ: ಮುನ್ಸಿಪಲ್ ಕಮಿಷನರ್ ಮಸೀದಿ ಕಮಿಟಿಗೆ ನಿರ್ದೇಶನ
ಶಿಮ್ಲಾದ ಸಂಜೋಲಿ ಮಸೀದಿಯ ಮೂರು ಅನಧಿಕೃತ ಅಂತಸ್ತುಗಳನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ಮುನ್ಸಿಪಲ್ ಕಮಿಷನರ್ ಮಸೀದಿ ಕಮಿಟಿಗೆ ನಿರ್ದೇಶನ ನೀಡಿದ್ದಾರೆ. ಈ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸಂಘ ಪರಿವಾರದ ಮಂದಿ ಕೆಲವು ದಿನಗಳ ಕಾಲ ಪ್ರತಿಭಟಿಸಿದ್ದರು ಮತ್ತು ಅದು ರಾಷ್ಟ್ರೀಯ ಸುದ್ದಿಯಾಗಿತ್ತು. ಈ ಮಸೀದಿ ಇರುವ ಭೂಮಿಯು ವಖ್ಫ್ ಬೋರ್ಡ್ ಗೆ ಸೇರಿದ್ದಾಗಿದ್ದು ಅದರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಮಸೀದಿ ಕಮಿಟಿ ಉತ್ತರ ನೀಡಿದೆ.
ಮಸೀದಿಯನ್ನು ದ್ವಂಸಗೊಳಿಸುವಂತೆ ಮುನ್ಸಿಪಲ್ ಕಮಿಷನರ್ ಅವರು ಅಕ್ಟೋಬರ್ ಐದರಂದು ಮಸೀದಿಗೆ ಪತ್ರ ಬರೆದಿದ್ದು ಇದನ್ನು ಜಾರಿಗೊಳಿಸುವುದಕ್ಕೆ ಎರಡು ತಿಂಗಳ ಕಾಲಾವಧಿಯನ್ನು ನೀಡಿದ್ದಾರೆ.
ಐದು ಅಂತಸ್ತಿನ ಮಸೀದಿ ಇದಾಗಿದ್ದು ಇದರಲ್ಲಿ ಮೂರು ಅಂತಸ್ತಿನ ಬಗ್ಗೆ ತಕರಾರು ಉಂಟಾಗಿದೆ. ಇದೇ ವೇಳೆ ಮುಸ್ಲಿಂ ವೆಲ್ಪೇರ್ ಕಮಿಟಿಯು ಮಸೀದಿಯ ಮೂರು ಅಂತಸ್ತನ್ನು ಧ್ವಂಸಗೊಳಿಸಲು ಒಪ್ಪಿಕೊಂಡಿದ್ದರೆ ಆಲ್ ಹಿಮಾಚಲ್ ಮುಸ್ಲಿಂ ಆರ್ಗನೈಸೇಷನ್ ಇದಕ್ಕೆ ವಿರುದ್ಧವಾಗಿ ನಿಂತಿದೆ.
ಈ ಮಸೀದಿ 125 ವರ್ಷಗಳ ಹಳೆಯದಾಗಿದ್ದು ಹೆಚ್ಚುವರಿ ಅಂತಸ್ತನ್ನು ಕಟ್ಟಿರುವುದರ ಬಗ್ಗೆ ಇನ್ನೂ ಅಧಿಕಾರಿಗಳಿಂದ ಯಾವುದೇ ತೀರ್ಮಾನ ಆಗಿಲ್ಲ. ಆ ಕುರಿತಾದ ದಾಖಲೆಗಳು ಅಧಿಕಾರಿಗಳ ಬಳಿ ಇದೆ. ಅವರು ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದ್ದರಿಂದ ಮುನ್ಸಿಪಲ್ ಕಮಿಷನರ್ ಅವರ ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ಆಲ್ ಹಿಮಾಚಲ್ ಮುಸ್ಲಿಂ ಆರ್ಗನೈಸೇಷನ್ ಹೇಳುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth