10ಕೋಟಿ ವೆಚ್ಚದಲ್ಲಿ ಶ್ರೀ ರಾಮಮಂದಿರ ಆಟದ ಮೈದಾನ ನವೀಕರಣ | ಎಸ್ ಸುರೇಶ್ ಕುಮಾರ್ ರವರಿಂದ ಕಾಮಗಾರಿಯ ಪ್ರಗತಿ ಪರಿಶೀಲನೆ - Mahanayaka

10ಕೋಟಿ ವೆಚ್ಚದಲ್ಲಿ ಶ್ರೀ ರಾಮಮಂದಿರ ಆಟದ ಮೈದಾನ ನವೀಕರಣ | ಎಸ್ ಸುರೇಶ್ ಕುಮಾರ್ ರವರಿಂದ ಕಾಮಗಾರಿಯ ಪ್ರಗತಿ ಪರಿಶೀಲನೆ

rajajji nagar
13/02/2023

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀರಾಮ ಮಂದಿರ ವಾರ್ಡ್ ನಲ್ಲಿ ಶ್ರೀರಾಮಮಂದಿರ ಆಟದ ಬೆಂಗಳೂರು,13:ಮೈದಾನವನ್ನು 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿ ಇದ್ದು ಸ್ಥಳಕ್ಕೆ ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಭೇಟಿ ಪ್ರಗತಿ ಪರಿಶೀಲನೆ ಮಾಡಿದರು.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಬೆಂಗಳೂರಿನ ಶ್ರೀ ರಾಮಮಂದಿರ ಆಟದ ಮೈದಾನ ರಾಮಲೀಲಾ ಮೈದಾನದಷ್ಟೆ ಪ್ರಸಿದ್ದಿ ಇದೆ. ರಾಷ್ಟದ ಮಹಾನ್ ನಾಯಕರುಗಳು ಶ್ರೀ ರಾಮ ಮಂದಿರ ಆಟದ ಮೈದಾನಕ್ಕೆ ಭೇಟಿ ನೀಡಿದ್ದಾರೆ. ಶ್ರೀ ರಾಮಮಂದಿರ ಆಟದ ಮೈದಾನವನ್ನು ನವೀಕರಣ ಕಾಮಗಾರಿ ಭರದಿಂದ ಸಾಗಿದೆ ಎಂದರು.

ಜನರು ಕುಳಿತುಕೊಳ್ಳುಲು ಗ್ಯಾಲರಿಯಲ್ಲಿ ಸುವ್ಯವಸ್ಥಿತ ಆಸನ ವ್ಯವಸ್ಥೆ, ಟೆನ್ ಸಿಲ್ ರೂಫ್,ರಕ್ಷಣಬೇಲಿ,ಹೊನಲು ಬೆಳಕು ವ್ಯವಸ್ಥೆಯನ್ನ ಮತ್ತು ಮುಖ್ಯದ್ವಾರ ಹಾಗೂ ವೇದಿಕೆ ಮೇಲ್ಛಾವಣಿಯನ್ನ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಆಟದ ಮೈದಾನದ ನವೀಕರಣ ಕಾಮಗಾರಿಯು ಅಂತಿಮ ಹಂತದಲ್ಲಿ ಇದ್ದು ಈ ತಿಂಗಳ ಅಂತ್ಯಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರ ಅಮೃತಹಸ್ತದಿಂದ ಸಾರ್ವಜನಿಕರಿಗೆ ಆಟದ ಮೈದಾನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರುಗಳ ಇಡಲಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಆನೇಕ ರಾಷ್ಟ್ರ ನಾಯಕರುಗಳು ಈ ಆಟದ ಮೈದಾನದಲ್ಲಿ ಬಹಿರಂಗ ಸಭೆ ಮಾಡಿದ ಇತಿಹಾಸವಿದೆ ಎಂದು ತಿಳಿಸಿದರು.

ಕ್ರೀಡಾ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಮುಖ್ಯ ಮಾನಸಿಕ,ದೃಹಿಕವಾಗಿ ಸದೃಢವಾಗಲು ಜನರಿಗೆ ಸಹಕಾರಿಯಾಗಲು 10ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ಮಾಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮಮಂದಿರ ಜೊತೆಯಲ್ಲಿ ಇನ್ನು ಐದು ಕ್ರೀಡಾಂಗಣ ನವೀಕರಣ ಕಾರ್ಯ ಮುಗಿಯುವ ಹಂತದಲ್ಲಿದೆ ಯುವ ಕ್ರೀಡಾಪಟುಗಳು, ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್, ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್, ಕಾರ್ಯದರ್ಶಿಗಳಾದ ಯಶಸ್ ನಾಯಕ್, ವಾರ್ಡ್ ಅಧ್ಯಕ್ಷರಾದ ಕಿರಣ್, ಬಿಜೆಪಿ ಮುಖಂಡರುಗಳಾದ ಸತೀಶ್ ಭಗವಾನ್,ಟಿ.ಎನ್.ರಮೇಶ್, ಕೃಷ್ಣಮೂರ್ತಿರವರು ಮತ್ತು ಕಾರ್ಯಪಾಲಕ ಅಭಿಯಂತರಾದ ಗಂಗಾಧರ್ ರವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ