ಕಳೆದ ಪ್ರವಾಹದಲ್ಲಿ ರೇಣುಕಾಚಾರ್ಯ ಬಳಸಿದ ಟ್ರಿಕ್ಸ್ ನ್ನು ಈ ಬಾರಿ ಪಿಎಸ್ ಐ ಬಳಸಿದ್ದಾರೆ ನೋಡಿ! - Mahanayaka
3:31 PM Wednesday 5 - February 2025

ಕಳೆದ ಪ್ರವಾಹದಲ್ಲಿ ರೇಣುಕಾಚಾರ್ಯ ಬಳಸಿದ ಟ್ರಿಕ್ಸ್ ನ್ನು ಈ ಬಾರಿ ಪಿಎಸ್ ಐ ಬಳಸಿದ್ದಾರೆ ನೋಡಿ!

22/10/2020

ಕಲಬುರಗಿ: ಕಳೆದ ಪ್ರವಾಹ ಸಂದರ್ಭದಲ್ಲಿ ರೇಣುಕಾಚಾರ್ಯ ಜನರನ್ನು ರಕ್ಷಿಸುತ್ತಿದ್ದೇನೆ ಎಂದು ಪಾದದವರೆಗಿರುವ ನೀರಿನಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿ ಜನರಿಗೆ ಮನರಂಜನೆಯ ವಸ್ತುವಾಗಿದ್ದರು. ಇದೀಗ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್ ಐಮಲ್ಲಣ್ಣ ‌ಯಲಗೋಡ, ರೇಣುಕಾಚಾರ್ಯ ಅವರಂತಹದ್ದೇ ಟ್ರಿಕ್ಸ್ ಬಳಸಿ, ಸುದ್ದಿಯಾಗಿದ್ದಾರೆ.

ಸೊಂಟದವರೆಗಿನ ನೀರಿನಲ್ಲಿ ನಿಂತು ಕುರಿ ಮರಿಗಳನ್ನು ತಾನು ರಕ್ಷಣೆ ಮಾಡಿರುವುದಾಗಿ ಪಿಎಸ್ ಐ ಪೋಸು ಕೊಟ್ಟಿದ್ದಾರೆ. ಪ್ರವಾಹದಲ್ಲಿ ಮುಳುಗಿದ ಮನೆಯತ್ತ ತೆರಳುವ ಈ ಅಧಿಕಾರಿ, ಮಾರ್ಗ ಮಧ್ಯೆ ಒಂದು ಕುರಿಮರಿ ಇದ್ರೆ ತರಿಸಿಕೊಡಿ. ಅದನ್ನೇ ರಕ್ಷಣೆ ಮಾಡಿದಂತೆ ಮಾಡೋಣ ಎಂದು ನಕಲಿ ರಕ್ಷಣಾ ಕಾರ್ಯಾಚರಣೆ ತೋರಿಸಲು ಮುಂದಾಗಿದ್ದಾರೆ.

ಪಿಎಸ್ ಐ ಮಲ್ಲಣ್ಣ ‌ಯಲಗೋಡ ಹೇಳಿದಂತೆ ಗ್ರಾಮಸ್ಥರೂ ನಡೆದುಕೊಂಡಿದ್ದಾರೆ. ಟಿವಿಯಲ್ಲಿ ಬರುವ ಹುಚ್ಚೋ ಏನೋ ತಿಳಿಯದು. ಆದರೆ ನಮಗೆ ಅನ್ಯಾಯವಾಗುತ್ತಿದೆ ಎನ್ನುವುದನ್ನೂ ಅರಿಯದ ಜನರು ಪಿಎಸ್ ಐ ಕುರಿಗಳನ್ನು ರಕ್ಷಣೆ ಮಾಡಿದ್ದಾರೆ ಎಂಬಂತೆ ಪೋಸು ಕೊಟ್ಟರು.

ವಿಪರೀತ ಪ್ರಚಾರದ ಗೀಳಿನಿಂದ ಪಿಎಸ್ ಐ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಸಂದರ್ಭದಲ್ಲಿಯೂ ಹಿಂಬಾಲಕರಿಂದ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಂಡು ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಇವರು ಮತ್ತೆ ಇದೀಗ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಸುದ್ದಿ