ರೇಣುಕಾಚಾರ್ಯ, ಕಾರಜೋಳ ಚಿರತೆ ಹಿಡಿಯುವುದರಲ್ಲಿ ಎಕ್ಸಪರ್ಟ್ ಗಳು | ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು: ಚಿರತೆ ಹಾವಳಿ ಮತ್ತು ಚಿರತೆ ಹಿಡಿಯುವ ವಿಷಯದಲ್ಲಿ ಸದನದಲ್ಲಿ ಸ್ವಾರಸ್ಯಕರ ಚರ್ಚೆಗಳು ನಡೆಯಿತು. ಚರ್ಚೆಯ ವೇಳೆ ಗೋವಿಂದ ಕಾರಜೋಳ ಹಾಗೂ ರೇಣುಕಾಚಾರ್ಯ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದೊಳಗೆ ಟ್ರೋಲ್ ಮಾಡಿದರು!
ಶೂನ್ಯವೇಳೆಯಲ್ಲಿ ಮಾತನಾಡಿದ ಸದಸ್ಯರಾದ ಅಬ್ಬಯ್ಯ ಪ್ರಸಾದ್ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳಿ ಸಮೀಪದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಆ ಭಾಗದಲ್ಲಿ ಜನ ಭಯಭೀತರಾಗಿದ್ದಾರೆ. ಶಾಲೆಗಳನ್ನು ಬಂದ್ ಮಾಡಲಾಗಿದೆ. ಚಿರತೆ ಭಯದಿಂದ ಕೂಲಿ-ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆಯಲ್ಲೇ ಕೂರುವಂತಾಗಿದೆ. ಚಿರತೆ ಬೆಟ್ಟದ ಸುತ್ತಮುತ್ತ ಓಡಾಡುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಅದನ್ನು ಹಿಡಿಯಲು ಸಮಸ್ಯೆಯಾದರೂ ಏನು? ಪರಿಣಿತರ ಕೊರತೆ ಇದೆಯೇ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಇವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕಾರಜೋಳ, ಕೂಡಲೇ ಪರಿಣಿತರ ತಂಡ ಕಳುಹಿಸಿ ಚಿರತೆ ಹಿಡಿದು ಸಮಸ್ಯೆ ಪರಿಹರಿಸಲಾಗುವುದು ಎಂದರು. ಆಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಚಿರತೆ ಹಿಡಿಯಲು ಪರಿಣಿತರ ತಂಡ ಯಾಕೆ? ಕಾರಜೋಳ ಅವರೇ ಹಿಡಿಯಬಹುದು ಎಂದರು. ಈ ವೇಳೆ ಸದನ ಕೆಲ ಕಾಲ ನಗೆಗಡಲಲ್ಲಿ ತೇಲಾಡಿತು. ಉತ್ತರ ಮುಂದುವರಿಸಿದ ಕಾರಜೋಳ, ಚಿರತೆ ಹಿಡಿಯಲು ಪರಿಣಿತರ ಅವಶ್ಯಕತೆ ಇದೆ ಎಂದರು.
ಇದಕ್ಕೂ ಮುನ್ನ ಶಾಸಕ ರೇಣುಕಾಚಾರ್ಯ, ತಮ್ಮ ಕ್ಷೇತ್ರ ಕೂಡ ಚಿರತೆಯ ಹಾವಳಿ ಇದೆ. ಇದರಿಂದ ಜನಭಯ ಭೀತರಾಗಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ಈ ವೇಳೆ ಮಧ್ಯೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರೇಣುಕಾಚಾರ್ಯ ಕ್ಷೇತ್ರದಲ್ಲಿ ಚಿರತೆ ಹಾವಳಿ ಇದೆ ಎಂದರೆ ನಾನು ಒಪ್ಪುವುದಿಲ್ಲ. ಬಹುಶಃ ಅವರು ಸುಳ್ಳು ಹೇಳುತ್ತಿರಬಹುದು. ಏಕೆಂದರೆ ಅವರಿರುವ ಜಾಗದಲ್ಲಿ ಚಿರತೆ ಬರಲು ಸಾಧ್ಯವೇ ಇಲ್ಲ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ
ಬೆಂಗಳೂರು: ಅಪಾರ್ಟ್ಮೆಂಟ್ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು: ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ!
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದ ತಾಯಿ, ಮಗ ದಾರುಣ ಸಾವು
ಓವೈಸಿ ಮನೆ ಧ್ವಂಸ ಪ್ರಕರಣ: ಐವರು ಹಿಂದೂ ಸೇನೆ ಕಾರ್ಯಕರ್ತರು ಅರೆಸ್ಟ್
ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?
ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ | ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ