RPI ಉಡುಪಿ ಜಿಲ್ಲಾಧ್ಯಕ್ಷರಾಗಿ ಸದಾಶಿವ ಶೆಟ್ಟಿ, ಪ್ರ.ಕಾರ್ಯದರ್ಶಿಯಾಗಿ ಸಂಜೀವ ನಾಯ್ಕ್ ಆಯ್ಕೆ - Mahanayaka
6:01 AM Thursday 12 - December 2024

RPI ಉಡುಪಿ ಜಿಲ್ಲಾಧ್ಯಕ್ಷರಾಗಿ ಸದಾಶಿವ ಶೆಟ್ಟಿ, ಪ್ರ.ಕಾರ್ಯದರ್ಶಿಯಾಗಿ ಸಂಜೀವ ನಾಯ್ಕ್ ಆಯ್ಕೆ

rpi
19/11/2022

ಉಡುಪಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಾವರದ ಧರ್ಮವರ ಸಭಾಂಗಣದಲ್ಲಿ ನಡೆಯಿತು.

ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಡಾ.ಆರ್. ಮೋಹನ್ ರಾಜ್ ನೇತೃತ್ವದಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅರ್ ಟಿ ಐ ಸಂಘಟನೆಗಳಲ್ಲಿ ಸಕ್ರಿಯಾಗಿರುವ  ಸದಾಶಿವ ಶೆಟ್ಟಿ ಹೇರೂರು ಇವರನ್ನು ಉಡುಪಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಕ್ಬರ್ ಪಾಶ, ಸದಾಶಿವ ಕುಂದಾಪುರ ,ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ನಾಯ್ಕ, ಸಂಘಟನಾ ಕಾರ್ಯದರ್ಶಿಗಳಾಗಿ  ಅಶಾ ಕುಕ್ಕೆಹಳ್ಳಿ,  ಮಹೇಶ್ ಉಡುಪ, ಉದಯ್ ದೇವಾಡಿಗ , ಜಂಟಿ ಕಾರ್ಯದರ್ಶಿಯಾಗಿ ಸುರೇಂದ್ರ ಕುಕ್ಕೆಹಳ್ಳಿ, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ರಮೇಶ್ ಮಾಬಿಯಾನ, ಸುಜಾತ ಹಾವಂಜೆ, ಸುರೇಖ ಸಂಜೀವ , ಗೋಪಾಲ ಶಿವಪುರ ,  ಜಿಲ್ಲಾ ಖಾಂಜಂಜಿ ವಿಠಲ ಹಾವಂಜೆ  ಸಾಮಾಜಿಕ ಜಾಲತಾಣ ನಿರ್ವಹಣೆಯ ಜವಾಬ್ದಾರಿಯನ್ನು  ಶರತ್ ಹಾವಂಜೆಯವರಿಗೆ ನೀಡಲಾಯಿತು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸದಶಿವ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಮಾಜಮುಖಿ ಹೋರಾಟದ ಜೊತೆಯಲ್ಲಿ ಆರ್ ಪಿ ಐ ಪಕ್ಷವನ್ನು ಕೂಡ ಜನ ಸಾಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲೆಯಲ್ಲಿ ಬಲಿಷ್ಟ ಪಕ್ಷವನ್ನಾಗಿ ಹೊರ  ಹೊಮ್ಮಿಸುವುದಾಗಿ ಹೇಳಿದರು.

ಸಭೆಯಲ್ಲಿ ಆರ್ ಪಿ ಐ ಕೆ ಪಕ್ಷದ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ ರಾಜ್, ರಾಜ್ಯ ಉಪಾಧ್ಯಕ್ಷರಾದ  ರಾಜು ಎಂ‌. ತಳವಾರ, ಶೇಖರ್ ಹಾವಂಜೆ , ಸ್ವಪ್ನ  ಮೋಹನ್, ಡಾ.ಜಿ.ಶಿವಕುಮಾರ್ , ರಾಜ್ಯ ಸಮಿತಿ ಸದಸ್ಯರಾದ ಶರಣು ಧೋರಣಾ ಹಳ್ಳಿ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ