ಬಕ್ರೀದ್ ಹಬ್ಬಕ್ಕೆಂದು ಬಂದು ಸಮುದ್ರದಲ್ಲಿ ಸಿಲುಕಿದ ಯುವಕನ ರಕ್ಷಣೆ!
ಸಮುದ್ರ ವಿಹಾರಕ್ಕೆ ಬಂದ ವೇಳೆ ಸಮುದ್ರದ ಭಾರೀ ಗಾತ್ರದ ಅಲೆಗಳ ನಡುವೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಬೆಂಗಳೂರು ಮೂಲದ ಯುವಕನನ್ನು ಮಂಗಳೂರು ನಗರದ ಮೊಗವೀರಪಟ್ನದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ರಕ್ಷಿಸಿರುವ ಘಟನೆ ಇಂದು ಉಳ್ಳಾಲ ಬೀಚ್ ನಲ್ಲಿ ನಡೆದಿದೆ.
ಬೆಂಗಳೂರು ಯಶವಂತಪುರ ನಿವಾಸಿ ನಿಝಾಮ್ (35) ಎಂಬಾತನನ್ನು ರಕ್ಷಿಸಲಾಗಿದೆ. ಈತನನ್ನು ಮೊಗವೀರಪಟ್ನ ಶಿವಾಜಿ ಜೀವರಕ್ಷಕ ದಳದ ವಿಕ್ರಮ್ ಪುತ್ರನ್, ಶ್ರಾವಣ್, ದೀಕ್ಷಿತ್ ಬಂಗೇರ, ದೀಕ್ಷಿತ್ ಚಂದನ್, ನಿಶಾಂತ್, ರಕ್ಷಿತ್ ಬಂಗೇರ, ರವಿ ಕಾಂಚನ್ ಹಾಗೂ ಸ್ಥಳದಲ್ಲಿ ಕರ್ತವ್ಯ ನಿರತ ಗೃಹರಕ್ಷಕದಳ ಸಿಬ್ಬಂದಿ ಪ್ರಸಾದ್ ಸುವರ್ಣ ಸೇರಿ ರಕ್ಷಿಸಿದ್ದಾರೆ.
ಬಕ್ರೀದ್ ಹಬ್ಬದ ರಜೆಯ ನಿಮಿತ್ತ ಬೆಂಗಳೂರಿನಿಂದ ಮೂವರು ಸ್ನೇಹಿತರು ದರ್ಗಾ ಸಂದರ್ಶನಕ್ಕೆಂದು ಬಂದಿದ್ದರು. ಅಲ್ಲಿಂದ ಮೂವರು ಉಳ್ಳಾಲ ಬೀಚ್ ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದರು.
ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಈ ನಡುವೆ ಸಮುದ್ರದ ನೀರಿನಲ್ಲಿ ಆಡಲು ತೊಡಗಿದ್ದ ಮೂವರ ಪೈಕಿ ನಿಝಾಂ ಅಲೆಗಳ ನಡುವೆ ಸಿಲುಕಿ ಸಮುದ್ರಪಾಲಾಗಿದ್ದ. ತಕ್ಷಣ ಸ್ಥಳದಲ್ಲಿದ್ದ ಶಿವಾಜಿ ಜೀವರಕ್ಷಕ ತಂಡದ ಸದಸ್ಯರು ಗಮನಿಸಿ ಭಾರೀ ಗಾತ್ರದ ಅಲೆಗಳ ನಡುವೆ ಈಜಿಕೊಂಡು ನಿಝಾಂನನ್ನು ರಕ್ಷಿಸಿದ್ದಾರೆ. ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw