ಚರಂಡಿಗೆ ಬಿದ್ದು ಒದ್ದಾಡುತ್ತಿದ್ದ ದನದ ರಕ್ಷಣೆ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪ ಇಂಜಾಡಿ ಬಳಿ ಮೋರಿಯ ಕೆಳಗೆ ಕಣಿ(ಚರಂಡಿ)ಗೆ ಬಿದ್ದು ಒದ್ದಾಡುತ್ತಿದ್ದ ದನವನ್ನು ಸುಬ್ರಹ್ಮಣ್ಯದ ಡಾ.ರವಿಕಕ್ಕೆಪದವು ಅವರ ತಂಡವು ರಕ್ಷಿಸಿದ ಘಟನೆ ಶನಿವಾರ ನಡೆದಿದೆ.
ಸುಬ್ರಹ್ಮಣ್ಯ ಸಮೀಪದ ಸುಳ್ಯ ರಸ್ತೆಯ ಇಂಜಾಡಿ ಎಂಬಲ್ಲಿ ಜರ್ಸಿ ದನವೊಂದು ಮೋರಿಯ ಕೆಳಗೆ ಬಿದ್ದು ದನದ ತಲೆಯು ಪೈಪಿನ ಕೆಳಗೆ ಸಿಕ್ಕಿ ಮೇಲಕ್ಕೇಳಾಗದ ಪರಿಸ್ಥಿತಿಯಲ್ಲಿತ್ತು. ಇದರ ಮಾಹಿತಿ ತಿಳಿದ ಸಮಾಜ ಸೇವಕ ರವಿಕಕ್ಕೆಪದವು ಹಾಗೂ ಮತ್ತಿತರರು ಸೇರಿ ಮೇಲಕ್ಕೆತ್ತಿ ರಕ್ಷಿಸಿದರು.
ಈ ಸಂಧರ್ಭದಲ್ಲಿ ಸುಮಾರು ಐದಿನೈದಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ದನವನ್ನು ಮೇಲೆತ್ತಿ ರಕ್ಷಿಸಿದರು. ಇವರೊಂದಿಗೆ ಸ್ಥಳೀಯ ಕುಕ್ಕೆಮೇಟ್ಸ್ ತಂಡದ ಸದಸ್ಯರು ಭಾಗವಹಿಸಿದ್ದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw