ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ - Mahanayaka
3:58 AM Tuesday 10 - December 2024

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ

gail omvedt
25/08/2021

ಸಾಂಗ್ಲಿ: ಭಾರತದ ದಲಿತ ಚಳುವಳಿ ಮತ್ತು ಅಂಬೇಡ್ಕರ್ ವಾದದ ಸಂಶೋಧಕಿ ಹಾಗೂ ಬರಹಗಾರ್ತಿ ಡಾ.ಗೇಲ್ ಓಮ್ವೇಡ್ ಅಲ್ಪಕಾಲದ ಅನಾರೋಗ್ಯದ ಬಳಿಕ ಬುಧವಾರ ಕಾಸೆಂಗಾಂವ್ ನಲ್ಲಿ ನಿಧನರಾಗಿದ್ದು, ತಮ್ಮ 81 ವರ್ಷ ವಯಸ್ಸಿನ ಬದುಕಿಗೆ ವಿದಾಯ ಹೇಳಿದ್ದಾರೆ.

ಅಮೆರಿಕದಲ್ಲಿ ಜನಿಸಿದ್ದರೂ, ಭಾರತಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರ ವಿಚಾರಗಳಿಂದ ಆಕರ್ಷಿತರಾದ ಅವರು, ದಲಿತರು, ಬಡವರು, ರೈತರು, ಮಹಿಳೆಯರು ಮತ್ತು ಇತರ ಸಾರ್ವಜನಿಕ ಚಳುವಳಿಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡರು.

ಅಮೆರಿಕದಲ್ಲಿ ತಮ್ಮ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಿದ್ದ ಅವರು,  1983ರಲ್ಲಿ ಭಾರತೀಯ ಪ್ರಜೆಯಾದರು.  1980ರ ದಶಕ ಆರಂಭದಲ್ಲಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ್ದರೂ, ಭಾರತದಕ್ಕೆ ಬಂದು ಅಂಬೇಡ್ಕರ್ ವಾದದಿಂದ ಪ್ರೇರಣೆಗೊಂಡು, ಇಲ್ಲಿಯ ಪ್ರಜೆಯೇ ಆಗಿ ಬದಲಾದ  ಅವರು ದಲಿತರ, ಬಡವರ, ಸಾರ್ಜನಿಕರ ಸೇವೆಯಲ್ಲಿ ತೊಡಗಿದ್ದರು.

ಡಾ.ಓಮ್ವೇಡ್ ಅವರ ಪತಿ ಡಾ.ಭರತ್ ಪಟಂಕರ್, ಪುತ್ರಿ ಪ್ರಾಚಿ, ಅಳಿಯ ತೇಜಸ್ವಿ ಹಾಗೂ ಮೊಮ್ಮಗಳು ನಿಯಾ ಅಮೇರಿಕದಲ್ಲಿ ನೆಲೆಸಿದ್ದಾರೆ.  ಡಾ.ಓಮ್ವೇಡ್ತ್ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ಬೆಳಗ್ಗೆ ಸಾಂಗ್ಲಿಯ ಕ್ರಾಂತಿವೀರ್ ಬಾಪೂಜಿ ಪತಂಕರ್ ಸಂಸ್ಥೆ ಕ್ಯಾಂಪಸ್ ನಲ್ಲಿ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

 

ಬಿಜೆಪಿ ಸರ್ಕಾರದ ಸ್ಥಿತಿ ‘ಒಲ್ಲದ ಸಂಸಾರ’ದಂತಿದೆ, ಯಾವಾಗ ಬೇಕಾದರೂ ಡಿವೋರ್ಸ್ ಆಗಬಹುದು | ಕಾಂಗ್ರೆಸ್

ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ

56ನೇ ವಯಸ್ಸಿನಲ್ಲಿ ಮತ್ತೆ ವಿವಾಹವಾದ ಬಹುಭಾಷಾ ನಟ ಪ್ರಕಾಶ್ ರೈ

ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?

ಕಾಂಗ್ರೆಸ್ ಭಯೋತ್ಪಾದನೆಯ ಮನಸ್ಥಿತಿಗಳನ್ನು ಪ್ರೋತ್ಸಾಹಿಸುತ್ತದೆ | ಸಚಿವೆ ಶೋಭಾ ಕರಂದ್ಲಾಜೆ

“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!

ಇತ್ತೀಚಿನ ಸುದ್ದಿ