ಊಟ ಮಾಡುವಾಗಲೂ ಮಾಸ್ಕ್ ಧರಿಸಿ: ಶೀಘ್ರವೇ ಬಳಕೆಗೆ ಬರಲಿದೆ Nose-only Mask
ಮೆಕ್ಸಿಕೊ: ಜನರು ಎಷ್ಟೇ ಮಾಸ್ಕ್ ಧರಿಸಿದರೂ ಹೊರಗಡೆ ಊಟಕ್ಕಾಗಿಯೋ, ಚಹಾ ಕುಡಿಯಲೋ ಹೋಗುವಾಗ ತಮ್ಮ ಮಾಸ್ಕ್ ತೆಗೆಯಲೇ ಬೇಕಾಗುತ್ತದೆ. ಇದೀಗ ಸಂಶೋಧಕರ ತಂಡವೊಂದು Nose-only Mask ನ್ನು ಪರಿಚಯಿಸಿದ್ದು, ಕೇವಲ ಮೂಗನ್ನು ಮುಚ್ಚುವ ಮಾಸ್ಕ್ ಬಳಕೆಗೆ ಬರಲಿದೆ.
ಯುಎಸ್ ಎಯ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಕೊರೊನಾ ವೈರಸ್ ವಾಸನೆಯನ್ನು ಗ್ರಹಿಸುವ ಮೂಗಿನ ಮೂಲಕ ದೇಹವನ್ನು ಸೇರುತ್ತದೆ. ಹಾಗಾಗಿ ಊಟ ಮಾಡುವಾಗಿ ಅಥವಾ ಏನನ್ನಾದರೂ ತಿನ್ನುವ ಸಂದರ್ಭ ಅನಿವಾರ್ಯವಾಗಿ ಮಾಸ್ಕ್ ತೆಗೆಯಲೇ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಜನರು ಸೋಂಕಿಗೊಳಗಾಗುತ್ತಿದ್ದಾರೆ. ಹಾಗಾಗಿ ಮೂಗನ್ನು ಮುಚ್ಚುವಂತಹ Nose-only Mask ಬಳಸಬೇಕು ಎಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ಹೇಳಿದೆ.
ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಮಾಸ್ಕ್ ಬಳಸುವುದರಿಂದ ಕೊರೊನಾ ವೈರಸ್ ನ್ನು ತಡೆಗಟ್ಟಬಹುದು ಎಂದು ಸರ್ಕಾರಗಳು ನಂಬಿವೆ. ಒಂದೆಡೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಇನ್ನೊಂದೆಡೆ ಎರಡನೇ ಹಂತದಲ್ಲಿ ಕೊರೊನಾ ವ್ಯಾಪಿಸುತ್ತಿದೆ. ಇದೇ ಸಂದರ್ಭದಲ್ಲಿ Nose-only Mask ಬಳಕೆಯ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ.
Researchers in Mexico have designed a 'nose-only mask' which they say protects you while eating and drinking pic.twitter.com/juzIGAhSrP
— Reuters (@Reuters) March 25, 2021
ನೀವಿನ್ನೂ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಲ್ಲವೇ? | ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ