ಟಾಯ್ಲೆಟ್ ಪೇಪರ್ ನಲ್ಲಿ ರಾಜೀನಾಮೆ ಪತ್ರ ಬರೆದ ಉದ್ಯೋಗಿ: ಭಾವುಕರಾದ ನೆಟ್ಟಿಗರು

ಉದ್ಯೋಗಿಯೊಬ್ಬ ಕಂಪೆನಿಯೊಂದಕ್ಕೆ ಬರೆದ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ರಾಜೀನಾಮೆ ಪತ್ರವು ಕಂಪೆನಿ ತನ್ನನ್ನು ಹೇಗೆ ನಡೆಸಿಕೊಂಡಿತು ಎನ್ನುವುದರ ಬಗ್ಗೆ ಉದ್ಯೋಗಿ ಬರೆದುಕೊಂಡಿದ್ದಾನೆ.
ಸಿಂಗಾಪುರ ಮೂಲದ ಉದ್ಯಮಿಯೊಬ್ಬರು ಈ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದು, ಇದೀಗ ಈ ಪತ್ರ ಇಂಟರ್ ನೆಟ್ ನಲ್ಲಿ ವ್ಯಾಪಕ ವೈರಲ್ ಆಗಿದೆ.
ಆ ಉದ್ಯೋಗಿ ತನ್ನ ರಾಜೀನಾಮೆ ಪತ್ರವನ್ನು ಟಾಯ್ಲೆಟ್ ಪೇಪರ್ ನಲ್ಲಿ ಬರೆದಿದ್ದು, “ನನ್ನನ್ನು ಟಾಯ್ಲೆಟ್ ಪೇಪರ್ ನಂತೆ ಬಳಸಿಕೊಳ್ಳಲಾಯ್ತು ಎಂದು ಭಾಸವಾಯಿತು. ಅಗತ್ಯವಿದ್ದಾಗ ಬಳಸಿ, ಎರಡನೇಯ ಆಯ್ಕೆಯೇ ಇಲ್ಲದಂತೆ ಎಸೆಯಲಾಯಿತು” ಎಂದು ಉದ್ಯೋಗಿಯು ಬರೆದುಕೊಂಡಿದ್ದಾನೆ.
ಅಂದ ಹಾಗೆ ಈ ವ್ಯಕ್ತಿಯ ರಾಜೀನಾಮೆ ಪತ್ರವನ್ನು ಕಂಪೆನಿಯ ನಿರ್ದೇಶಕಿ ಏಂಜೆಲಾ ಯೆಹ್ ಎಂಬವರು ಹಂಚಿಕೊಂಡಿದ್ದು, ಕಂಪೆನಿಗಳಲ್ಲಿ ಉದ್ಯೋಗಿಗಳನ್ನ ಹೇಗೆ ಬಳಸಿಕೊಳ್ಳಲಾಗುತ್ತದೆ, ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಲು ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಉದ್ಯೋಗಿಗಳನ್ನು ನೀವು ಸರಿಯಾಗಿ ನಡೆಸಿಕೊಂಡರೆ, ಅವರು ನಿಮ್ಮ ಕಂಪೆನಿಯಿಂದ ನಿರ್ಗಮಿಸಲು ತೀರ್ಮಾನಿಸಿದರೆ, ಕೃತಜ್ಞತೆಯಿಂದ ಹೊರ ನಡೆಯುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: