11:00 AM Wednesday 12 - March 2025

ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನ

udupi
23/08/2023

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಆಗಸ್ಟ್ 23 ಬುಧವಾರದಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಶಿರ್ವ ಮೂಲದ ದಿವಂಗತ ಲೂಯಿಸ್ ಮೆನೆಜಸ್ ಮತ್ತು ದಿವಂಗತ ಮೇರಿ ಮ್ಯಾಗ್ಡೆಲೀನ್ ಮೆನೆಜಸ್ ಅವರ ಮಗನಾಗಿ ಜುಲೈ 28, 1948 ರಂದು ಜನಿಸಿದರು.

ಇನ್ನು ಅಕ್ಟೋಬರ್ 25,1974 ರಂದು ಅವರಿಗೆ ಯಾಜಕಿ ದೀಕ್ಷೆ ಲಭಿಸಿತು. ಬ್ಯಾಪ್ಟಿಸ್ಟ್ ಮೆನೆಜಸ್ ಅವರು, ರೋಮ್ನ ಲ್ಯಾಟರನ್ ವಿಶ್ವವಿದ್ಯಾಲಯದಿಂದ ನೈತಿಕ ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಅಗ್ರಾರ್ನ ಮೋಸ್ಟ್ ಹೋಲಿ ರಿಡೀಮರ್ ಚರ್ಚ್ನಲ್ಲಿ ಸಹಾಯಕ ಧರ್ಮಗುರು ಮತ್ತು ಮಂಗಳೂರಿನ ಜೆಪ್ಪುವಿನ ಸೇಂಟ್ ಆಂಟೋನಿ ಚಾರಿಟೇಬಲ್ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾದ ನಂತರ, ಅವರನ್ನು 1977 ರಲ್ಲಿ ರೋಮ್ಗೆ ನೈತಿಕ ದೇವತಾಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ನಿಯೋಜಿಸಲಾಯಿತು.

1982 ರಲ್ಲಿ ಅವರ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿ ಬಳಿಕ ಬೆಂಗಳೂರಿನ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಗೆ ಸೇರಿ ಅಲ್ಲಿ1994 ರವರೆಗೆ ಸೇವೆ ಸಲ್ಲಿಸಿದರು.

1995ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿರುವ ಸೈಂಟ್ ಜೋಸೆಫ್ ಇಂಟರ್-ಡಯಾಸಿಸ್ ಸೆಮಿನರಿಯ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. 1997ರಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾಗಿ 2007ರ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು. ಅವರು 2012 ರಲ್ಲಿ ಉಡುಪಿಯ ಹೊಸ ಧರ್ಮಪ್ರಾಂತ್ಯದ ಮೊದಲ ವಿಕಾರ್ ಜನರಲ್ ಆಗಿ ನೇಮಕಗೊಂಡರು, ಅದಕ್ಕೂ ಮುನ್ನ ಅವರು ಉಡುಪಿ ಜಿಲ್ಲೆಯ ಎಪಿಸ್ಕೊಪಲ್ ವಿಕಾರ್ ಆಗಿ ಸೇವೆ ಸಲ್ಲಿಸಿದ್ದರು.

ವಿಕಾರ್ ಜನರಲ್ ಹುದ್ದೆ ಸ್ವೀಕರಿಸಿದ ದಿನದಿಂದ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮೆನೇಜಸ್ ಅವರು ಅತ್ಯಂತ ಉತ್ಸಾಹ, ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ವಿಕಾರ್ ಜನರಲ್ ಆಗಿ ಸೇವೆ ಸಲ್ಲಿಸಿದರು ಮತ್ತು ಧರ್ಮಪ್ರಾಂತ್ಯದ ಸೇವೆಯಲ್ಲಿ ತಮ್ಮನ್ನು ತಾವು ಕಳೆದರು. ಕಳೆದ ಹತ್ತೂವರೆ ವರ್ಷಗಳಿಂದ ಧರ್ಮಪ್ರಾಂತ್ಯದ ಒಳಿತಿಗಾಗಿ ಬಿಷಪ್ ಅವರ ವಿನಮ್ರ ಸೇವಕ ಮತ್ತು ನಿಷ್ಠಾವಂತ ಸಹಯೋಗಿಯಾಗಿ ಕೆಲಸ ಮಾಡಿದರು.
ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ, ಪ್ರಸ್ತುತ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ ಡಾ ರೋಶನ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version