ವಾಹನಗಳ ರೆಟ್ರೋ ರಿಪ್ಲೆಕ್ಟಿವ್ ಟೇಪ್ ರೇಟ್ ಕೇಳಿ ವಾಹನ ಮಾಲಿಕರು ಶಾಕ್, ಸ್ಥಳದಲ್ಲೇ ಪ್ರತಿಭಟನೆ
ಬೆಳ್ತಂಗಡಿ: ವಾಹನದ ಅರ್ಹತಾ ಪತ್ರ (Fitness Certificate) ನೀಡುವ ಸಂದರ್ಭಗಳಲ್ಲಿ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ & ರೆಯರ್ ಮಾರ್ಕಿಂಗ್ ಪ್ಲೆಟ್(Retro reflective tape &rear marking plate) ಹಾಕಬೇಕು. ಈ ಸ್ಟಿಕ್ಕರಿಗೆ ದುಬಾರಿ ಹಣ ನೀಡುವ ಬಗ್ಗೆ ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದು, ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಸ್ಥಳಕ್ಕೆ ತೆರಳಿ ವಾಹನ ಚಾಲಕರು ಹಾಗೂ ಮಾಲಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತಾತ್ಕಾಲಿಕವಾಗಿ ವಸೂಲಾತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಇದೀಗ ಅಧಿಕಾರಿಗಳು ತಾತ್ಕಾಲಿಕವಾಗಿ ಹೆಚ್ಚವರಿ ಹಣ ವಸೂಲಾತಿಯನ್ನು ಸ್ಥಗಿತಗೊಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಲಾರಿ ಬಸ್ ಸೇರಿದಂತೆ ಎಫ್ ಸಿ ಮಾಡಲು ವಾಹನಗಳನ್ನು ಮಾಲಕರು ಬೆಳ್ತಂಗಡಿ ಎಪಿಎಂಸಿ ಪ್ರಾಂಗಣಕ್ಕೆ ತಂದಾಗ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಸಂಸ್ಥೆಯವರು ಹಾಕುವ ರಿಪ್ಲೆಕ್ಟರ್ ಸ್ಟಿಕರ್ ಅಳವಡಿಸಿದ ನಂತರ ಎಫ್ ಸಿ ಮಾಡುವ ಬಗ್ಗೆ ಆದೇಶವಾಗಿದ್ದು,ಈ ಸ್ಟಿಕರ್ ದರ 1 ಮೀಟರ್ ದರ ರೂ.160 ಆಗಿದ್ದು, ಒಂದು ಪಿಕಪ್ ವಾಹನದ ಸ್ಟಿಕರ್ ಗೆ ಸುಮಾರು 1,400 ಲಾರಿಗಳಿಗೆ ಅಂದಾಜು 5 ಸಾವಿರ ರೂಪಾಯಿ ನೀಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನೂರಿನ್ನೂರು ರುಪಾಯಿಗೆ ಆಗುತ್ತಿದ್ದ ಸ್ಟಿಕರ್ ಗೆ ಏಕಾ ಏಕಿ ಇಷ್ಟೊಂದು ಹಣ ಹೆಚ್ಚು ಮಾಡಿರುವುದು ವಾಹನ ಮಾಲಕರು ಹಾಗೂ ಚಾಲಕರ ಆಕ್ರೋಶಕ್ಕೆ ಕಾರಣವಾಯಿತು. ಅವರು ಪ್ರತಿಭಟನೆಗೂ ಮುಂದಾದರು. ಈ ಬಗ್ಗೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ವಸಂತ ಬಂಗೇರ ಅವರು ವಾಹನ ಚಾಲಕರು, ಮಾಲಕರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ವಾಹನ ಮಾಲಕರು ಕೇವಲ ಬಂಟ್ವಾಳ, ಪುತ್ತೂರು ಆರ್ ಟಿ.ಒ ವ್ಯಾಪ್ತಿಯಲ್ಲಿ ಮಾತ್ರ ಈ ರೀತಿ ಆಗಿದೆ ಮಾಹಿತಿ ನೀಡದೇ ಈ ರೀತಿ ಮಾಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಮಾಜಿ ಶಾಸಕ ವಸಂತ ಬಂಗೇರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ಏಕಾಏಕಿ ಈ ರೀತಿ ಮಾಡುವುದು ತಪ್ಪು ಕೊರೊನಾದಿಂದ ಈಗಷ್ಟೇ ಚೇತರಿಕೆ ಕಾಣುತ್ತಿರುವ ವಾಹನ ಮಾಲಕರಿಗೆ ಇದೊಂದು ದೊಡ್ಡ ಹೊರೆಯಾಗಲಿದೆ ಅದ್ದರಿಂದ ಈ ಬಗ್ಗೆ ಪರಿಶೀಲಿಸಿ ತಾತ್ಕಾಲಿಕವಾ ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಸ್ಪಂದಿಸಿದ ಅಧಿಕಾರಿಗಳು ಮುಂದಿನ ಆದೇಶದವರೆಗೆ ಹಿಂದಿನಂತೆ ಮುಂದುವರಿಯುವ ಭರವಸೆ ನೀಡಿದ್ದು ಹಿಂದಿನಂತೆಯೇ ಅರ್ಹತಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಅನ್ಯಾಯವಾಗಿ ಹಣ ವಸೂಲಿಗೆ ಸರಕಾರ ಮುಂದಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬಂಗೇರ ಅವರು ಎಚ್ಚರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka