ಆಪರೇಷನ್ ಕಮಲ ಆರೋಪದ ಬೆನ್ನಲ್ಲೇ ರೇವಣ್ಣ ಕಾಲಿಗೆ ನಮಸ್ಕರಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್! - Mahanayaka
6:13 PM Sunday 14 - September 2025

ಆಪರೇಷನ್ ಕಮಲ ಆರೋಪದ ಬೆನ್ನಲ್ಲೇ ರೇವಣ್ಣ ಕಾಲಿಗೆ ನಮಸ್ಕರಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್!

revanna santhosh
05/07/2021

ಹಾಸನ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಮೇಲೆ ಜೆಡಿಎಸ್ ನಾಯಕರು ಆಪರೇಷನ್ ಕಮಲದ ಆರೋಪ ಹೊರಿಸಿದ ಬೆನ್ನಲ್ಲೇ, ಸಂತೋಷ್ ಅವರು, ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಅವರ ಕಾಲಿಗೆ ನಮಸ್ಕರಿಸಿದ ಘಟನೆ ವರದಿಯಾಗಿದೆ.


Provided by

ಇಂದು ಸಂತೋಷ್ ಅವರು ಪತ್ರಿಕಾಗೋಷ್ಠಿ ನಡೆಸಲು ಪ್ರವಾಸಿ ಮಂದಿರಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಬೇರೊಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದು, ಈ ವೇಳೆ ಇಬ್ಬರೂ ಮುಖಾಮುಖಿಯಾಗಿದ್ದಾರೆ ಎನ್ನಲಾಗಿದೆ.

ರೇವಣ್ಣ ಅವರನ್ನು ಕಂಡ ಸಂತೋಷ್ , ಅರಸಿಕರೆ ನಗರಸಭೆ ಅಧ್ಯಕ್ಷರನ್ನು ಪರಿಚಯ ಮಾಡಿ, ರೇವಣ್ಣ ಕಾಲಿಗೆ ನಮಸ್ಕರಿಸಿದರು.  ಈ ವೇಳೆ ರೇವಣ್ಣ ಅವರು, ಹೊಸ ಅಧ್ಯಕ್ಷರು ಚೆನ್ನಾಗಿ ಕೆಲಸ ಮಾಡಲಿ. ಜಿಲ್ಲೆ ಅಭಿವೃದ್ಧಿ ಆಗಬೇಕು ಎಂದು ಸಲಹೆ ನೀಡಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್, ಅರಸಿಕೆರೆ ನಗರಸಭೆಯ ಸದಸ್ಯರನ್ನು ಆಪರೇಷನ್ ಕಮಲ ಮೂಲಕ ಸೆಳೆಯುತ್ತಿದ್ದಾರೆ ಎಂದು ಅರಸಿಕೆರೆ ಶಾಸಕರ ಜೊತೆಗೆ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಆರೋಪಿಸಿದ್ದರು.

ಇತ್ತೀಚಿನ ಸುದ್ದಿ