ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ - Mahanayaka
12:01 PM Friday 20 - September 2024

ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

election commission
12/08/2023

ಬೆಂಗಳೂರು: ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವಿಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ನೈಋತ್ಯ ಪದವಿಧರ ಕ್ಷೇತ್ರ ಶ್ರೀ ಆಯನೂರು ಮಂಜುನಾಥ್ ಅವರ ರಾಜೀನಾಮೆಯಿಂದ 19-4-2023 ರಿಂದ ತೆರವಾಗಿದ್ದು, ಈ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 21-06=-2024 ರ ವರೆಗೆ ಇದೆ.  ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶ್ರೀ ಪುಟ್ಟಣ್ಣ ಅವರ ರಾಜೀನಾಮೆಯಿಂದ 16-03-2023 ರಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 11-11-2026ರ ವರೆಗೆ ಇದೆ.

21-06-2024 ಕ್ಕೆ ಈಶಾನ್ಯ ಪದವಿಧರ ಕ್ಷೇತ್ರದಿಂದ ಡಾ. ಚಂದ್ರಶೇಖರ ಬಿ. ಪಾಟೀಲ್, 21-06-2024 ಕ್ಕೆ ಬೆಂಗಳೂರು ಪದವಿಧರ ಕ್ಷೇತ್ರದಿಂದ ಶ್ರೀ ಎ. ದೇವೇಗೌಡ,  21-06-2024 ಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ. ವೈ.ಎ. ನಾರಾಯಣ ಸ್ವಾಮಿ, 21-06-2024 ಕ್ಕೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೆಗೌಡ, 21-06-2024 ಕ್ಕೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಶ್ರೀ ಮರಿತಿಬ್ಬೇಗೌಡ ನಿವೃತ್ತಿಯಾಗುತ್ತಿದ್ದಾರೆ.


Provided by

ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟೀಸ್ ಅನ್ನು 30-09-2023 ಪ್ರಕಟಣೆ ಮಾಡಬೇಕಾಗಿದೆ.

ಫಾರಂ 18 ಅಥವಾ 19 ರಲ್ಲಿ ಅರ್ಜಿ ಸ್ವೀಕರಿಸಲು 06-11-2023 ಕಡೆಯ ದಿನವಾಗಿದೆ. ಮತದಾರರ ಕರಡು ಪ್ರತಿ ಪ್ರಕಟಿಸುವ ದಿನ 23-11-2023, ಮತದಾರರ ಪಟ್ಟಿ ಪ್ರಕಟಣೆ ದಿನ 23-11-2023, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು 23-11-2023 ರಿಂದ 09-12-2023 ರ ವರೆಗೆ ಅವಕಾಶವಿದೆ.

ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನಿವಾರಿಸಿ ಪೂರಕ ಪ್ರತಿಗಳನ್ನು ಸಿದ್ಧಪಡಿಸಿ ಪ್ರಕಟಿಸಲು 25-12-2023 ಹಾಗೂ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ 30-12-2023 ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಸಮಗ್ರ ನಿರ್ದೇಶಗಳ ಅನ್ವಯ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿ