ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋರೂಂ ಉದ್ಘಾಟಿಸಿದ ಸಚಿವ! | ಜಗತ್ತಿನಲ್ಲೇ ಇದು ಮೊದಲು! - Mahanayaka
12:54 AM Tuesday 9 - September 2025

ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋರೂಂ ಉದ್ಘಾಟಿಸಿದ ಸಚಿವ! | ಜಗತ್ತಿನಲ್ಲೇ ಇದು ಮೊದಲು!

ribbon cutting ceremony
03/09/2021

ಪಾಕಿಸ್ತಾನ: ಶೋರೂಂ ಉದ್ಘಾಟನೆಗೆ ಆಗಮಿಸಿದ್ದ ಪಾಕಿಸ್ತಾನದ ಸಚಿವರೊಬ್ಬರು ಕತ್ತರಿಯ ಬದಲು  ಬಾಯಿಯಿಂದಲೇ ರಿಬ್ಬನ್ ಕತ್ತರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವ ಫಯಾಜ್ ಅಲ್ ಹಸನ್ ಚೌಹಾಣ್ ಅವರು ಶೋರೂಂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರ್ಯಕ್ರಮ ಆಯೋಜಕರು ರಿಬ್ಬನ್ ಕಟ್ ಮಾಡಲು ಕತ್ತರಿ ನೀಡಿದ್ದಾರೆ. ಆದರೆ ಕತ್ತರಿಯಲ್ಲಿ  ರಿಬ್ಬನ್ ಕಟ್ ಆಗಲಿಲ್ಲ. ಈ ವೇಳೆ ಸಚಿವರು ರಿಬ್ಬನ್ ನ್ನು ಕಚ್ಚಿ ತುಂಡರಿಸಿ ಶೋರೂಂ ಉದ್ಘಾಟಿಸಿದರು.

ಕತ್ತರಿಯಿಂದ ಕತ್ತರಿಸಲು ಸಾಧ್ಯವಾಗದೇ ಇದ್ದಾಗ, ಸಚಿವರು ಹಲ್ಲಿನಿಂದ ಕಚ್ಚಿಕಚ್ಚಿ ರಿಬ್ಬನ್ ನ್ನು ಕತ್ತರಿಸಿದರು. ಈ ವೇಳೆ ಜೊತೆಗಿದ್ದವರು ನಗೆಗಡಲಲ್ಲಿ ತೇಲಾಡಿದ್ದಾರೆ. ಅಷ್ಟೊಂದು ದೊಡ್ಡ ಶೋರೂಂ ಮಾಡಿದ ಬಳಿಕ ಉದ್ಘಾಟನೆಗೆ ಒಂದು ಉತ್ತಮ ಕತ್ತರಿ ನೀಡದ  ಶೋರೂಂ ಮಾಲಿಕರಿಂದಾಗಿ ಸಚಿವರು ಕಚ್ಚಿಯೇ ರಿಬ್ಬನ್ ಕಟ್ ಮಾಡುವಂತಾಯಿತು.

ಈ ರೀತಿಯದ್ದೊಂದು ಉದ್ಘಾಟನಾ ಕಾರ್ಯಕ್ರಮ ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ನಡೆದಿದೆ. ರಿಬ್ಬನ್ ಹೀಗೂ ಕತ್ತರಿಸಬಹುದು ಎಂದು ಪಾಕ್ ಸಚಿವ ಫಯಾಜ್ ಉಲ್ ಹಸನ್ ಚೌಹಾಣ್ ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಇನ್ನಷ್ಟು ಸುದ್ದಿಗಳು…

ಟೋಯಿಂಗ್ ಮಾಡುವಾಗ ವಾಹನ ಮಾಲಿಕ ಸ್ಥಳದಲ್ಲೇ ಇದ್ದರೆ, ನೋ ಪಾರ್ಕಿಂಗ್ ಶುಲ್ಕ ಪಡೆದು ವಾಹನ ಬಿಟ್ಟುಕೊಡಬೇಕು | ಸಚಿವ ಆರಗ ಜ್ಞಾನೇಂದ್ರ ಸೂಚನೆ

ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?

ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು

ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು | ಓವೈಸಿ ಕಿಡಿ

ಪಬ್ ನಲ್ಲಿ ಅಪ್ರಾಪ್ತ ಬಾಲಕಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್: ಪಬ್ ಮ್ಯಾನೇಜ್ ಮೆಂಟ್ ಗೆ ಸಂಕಷ್ಟ!

ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಫೋಕ್ಸೋ ಪ್ರಕರಣದ ಆರೋಪಿ

ಜಾಮೀನಿನಲ್ಲಿ ಹೊರ ಬಂದ ಲೈಂಗಿಕ ಕಿರುಕುಳದ ಆರೋಪಿ ಸಂತ್ರಸ್ತೆಯನ್ನು ಗುಂಡಿಟ್ಟು ಕೊಂದ!

ಇತ್ತೀಚಿನ ಸುದ್ದಿ