ಅತ್ತ ಜೀವಗಳ ಒದ್ದಾಟ: ಇತ್ತ ‘ಮೀಸಲಾತಿ’ ಹೆಸರಲ್ಲಿ ವಿಕೃತ ಚರ್ಚೆ

ಅತ್ತ ಜೀವಗಳ ಒದ್ದಾಟ. ಇತ್ತ ರಕ್ತದಲ್ಲೂ ರಾಜಕೀಯ. ಸಮಾಜದಲ್ಲಿ ಎಂತಹ ಕ್ರೂರ ಮನಸ್ಸುಗಳು, ವಿಕೃತ ಮನೋಭಾವ ಇದೆ ಎಂಬುದಕ್ಕೆ ಇದುವೇ ಉದಾಹರಣೆ. ಇದನ್ನು ಹೇಳೋಕೇ ಮನಸ್ಸು ಭಾರವಾಗುತ್ತದೆ. ಆದರೆ ಹೇಳಲೇಬೇಕು.
ಹೌದು…! ಒಡಿಶಾ ರೈಲು ದುರಂತವನ್ನು ಮುಂದಿಟ್ಟುಕೊಂಡು ಸಾಮಾಜಿಕ ಪ್ರಾತಿನಿಧ್ಯ ಉದ್ದೇಶಕ್ಕೆ ಪ್ರಾರಂಭಿಸಲಾದ ಮೀಸಲಾತಿಯನ್ನು ಹಲವು ಬಲಪಂಥೀಯರು ವಿರೋಧಿಸಿದ್ದಾರೆ. ಮೀಸಲಾತಿಯಿಂದ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವನ್ನು ನೀಡದೆ ಕಡಿಮೆ ಅಂಕ ಗಳಿಸಿದವರಿಗೂ ನೀಡಲಾಗುತ್ತದೆ. ಹೀಗಾಗಿ ಒಡಿಶಾ ರೈಲು ದುರಂತದಂತಹ ಪ್ರಕರಣ ಘಟಿಸುತ್ತದೆ ಎಂದು ಮೀಸಲಾತಿ ವಿರೋಧಿಗಳು ಪ್ರಚಾರ ಮಾಡುತ್ತಿದ್ದಾರೆ.
ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 250 ಕ್ಕೂ ಹೆಚ್ಚು ಜನರ ಬಗ್ಗೆ ಈ ಜಾತಿವಾದಿ ಜನರಿಗೆ ಯಾವುದೇ ಅನುಕಂಪವಿಲ್ಲ. ಆದರೆ ಮೀಸಲಾತಿಯನ್ನು ದೂಷಿಸಲು ಮತ್ತು ತಮ್ಮದೇ ಜಾತಿಯ ಅಸಮರ್ಥ ಮಂತ್ರಿಯನ್ನು ರಕ್ಷಿಸಲು ಅವರು ಎಂದಿಗೂ ಮರೆಯುವುದಿಲ್ಲ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.
70% ಸಿಬ್ಬಂದಿ ಕೋಟಾದಿಂದ (ಮೀಸಲಾತಿ) ಬಂದವರು ಇರುವವರೆಗೆ ಈ ರೀತಿಯ ಅಪಘಾತಗಳು ಎಂದಿಗೂ ನಿಲ್ಲುವುದಿಲ್ಲ. ನೀವು ಕಡಿಮೆ ಅರ್ಹತೆ ಹೊಂದಿರುವವರನ್ನು ನೇಮಿಸುವುದರಿಂದ ಪ್ರತಿಭಾವಂತ ಮತ್ತು ಬುದ್ಧಿವಂತ ಜನರು ಬದಿಗೆ ಸರಿಯುತ್ತಾರೆ, ನೀವು ಸ್ವಇಚ್ಛೆಯಿಂದ ಆಹ್ವಾನಿಸುತ್ತಿದ್ದೀರಿ ಮತ್ತು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದೀರಿ ಮತ್ತು ಜನರ ಜೀವನದೊಂದಿಗೆ ಆಟವಾಡುತ್ತಿದ್ದೀರಿ ಎಂದು ರೈಲು ಅಪಘಾತದ ಸುದ್ದಿಗೆ ಆದಿತ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw