ಮೋದಿ ಅದ್ಭುತ ನಾಯಕ, ರಾಹುಲ್ ಗಾಂಧಿ, “ನೋ ಕಾಮೆಂಟ್ಸ್”: ರಿಷಬ್ ಶೆಟ್ಟಿ ವಿಡಿಯೋ ವೈರಲ್
‘ಕಾಂತಾರ’ ಚಿತ್ರ ಯಶಸ್ವಿ ಪ್ರದರ್ಶನವಾಗ್ತಿದೆ. ಚಿತ್ರಕ್ಕೆ ದೇಶಾದ್ಯಂತ ಉತ್ತಮ ಬೆಂಬಲ ಕೂಡ ವ್ಯಕ್ತವಾಗ್ತಿದೆ. ಈ ನಡುವೆ ‘ಕಾಂತಾರ’ ಚಿತ್ರದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ನಿರೂಪಕಿಯು ಸಿನಿಮಾ ನಟರ ಹೆಸರು ಹೇಳಿ ಚುಟುಕು ಪ್ರಶ್ನೆಗಳನ್ನು ಕೇಳುತ್ತಾ ಕೊನೆಗೆ ಏಕಾಏಕಿ ಪ್ರಧಾನಿ ಮೋದಿಯ ಹೆಸರು ಹೇಳುತ್ತಾರೆ. ನರೇಂದ್ರ ಮೋದಿ ಹೆಸರಿಗೆ “ಅದ್ಭುತ ನಾಯಕ” ಎಂದು ಹೇಳಿದ, ರಿಷಬ್ ಶೆಟ್ಟಿ ರಾಹುಲ್ ಗಾಂಧಿ ಹೆಸರಿಗೆ ‘ನೋ ಕಾಮೆಂಟ್ಸ್’ ಅಂತಾರೆ. ಈ ವಿಡಿಯೋ ಇದೀಗ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳ ಎಡಿಟಿಂಗ್ ಪ್ರತಿಭೆಗಳ ಕೈಗೆ ಸಿಕ್ಕಿದ್ದು, ಎಕ್ಟ್ರಾ ಫಿಟ್ಟಿಂಗ್ ಗಳನ್ನು ಇಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.
ರಿಷಬ್ ಶೆಟ್ಟಿ, ರಾಹುಲ್ ಗಾಂಧಿ ಬಗ್ಗೆ ಯಾವುದೇ ಕೆಟ್ಟ ಹೇಳಿಕೆ ನೀಡಿಲ್ಲ. “ಯಾವುದೇ ಪ್ರತಿಕ್ರಿಯೆ ಇಲ್ಲ” ಅಂತ ಹೇಳೋದು ತಪ್ಪಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿಯ ಬಿಡಲಾಗಿರುವ ವಿಡಿಯೋ ಕಾಂಗ್ರೆಸಿಗರನ್ನು ಕೆರಳಿಸಿದೆ.
ಅಂತೂ ಇಂತೂ ಚಿತ್ರ ನಟರನ್ನು ರಾಜಕೀಯ ವಿಚಾರಗಳಿಗೆ ಡಿಕ್ಕಿ ಹೊಡೆಸಿ ಅನಾಹುತ ನೋಡಿ ಮಜಾ ಪಡೆಯುವ ಖಾಸಗಿ ಚಾನೆಲ್ ಗಳ ಚಟಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಟರಿಗೆ ಅವರ ಚಿತ್ರಗಳ ಬಗ್ಗೆ ಪ್ರಶ್ನೆ ಕೇಳುವ ಬದಲು ರಾಜಕೀಯ ಪ್ರಶ್ನೆಗಳನ್ನು ಕೇಳಿ ಸಂದಿಗ್ಧತೆಯಲ್ಲಿ ಸಿಲುಕಿಸುವುದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka