ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ಯೂಟ್ಯೂಬರ್!: Rishab Shettyಗೆ ಶಾಕ್! - Mahanayaka

ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ಯೂಟ್ಯೂಬರ್!: Rishab Shettyಗೆ ಶಾಕ್!

kanthara
14/10/2022

ಹಿಂದಿಯ ಜನಪ್ರಿಯ ಯೂಟ್ಯೂಬರ್ ಸೂರಜ್ ಕುಮಾರ್ ಅವರು ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ಕಾಂತಾರ ಚಿತ್ರದ ವಿಚಾರವಾಗಿ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಅವರು ಸಂದರ್ಶನಕ್ಕೆ ತೆರಳಿದ್ದರು. ಸಂದರ್ಶನದ ವೇಳೆ, ಸರ್ ದಯವಿಟ್ಟು ಎದ್ದು ನಿಂತುಕೊಳ್ಳಿ ಸರ್ ಎಂದು ರಿಷಬ್ ಗೆ  ಸೂರಜ್ ಹೇಳಿದ್ದಾರೆ. ಬಳಿಕ ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡರು. ಬಳಿಕ ಅವರ ಕಾಲಿಗೆ ನಮಸ್ಕರಿಸಿದ್ದಾರೆ.

ಏಕಾ ಏಕಿ ನಡೆದ ಘಟನೆಯಿಂದಾಗಿ ರಿಷಬ್ ಶೆಟ್ಟಿ ಕೂಡ ಗಲಿಬಿಲಿಗೊಂಡಿದ್ದಾರೆ. ತಕ್ಷಣವೇ ಅವರು ಕಾಲಿಗೆ ಬೀಳುವುದನ್ನು ತಡೆಯಲು ಯತ್ನಿಸಿದ್ದಾರೆ.


Provided by

“ನಾನು ತಮಾಷೆ ಮಾಡ್ತಿಲ್ಲ, ಈ ರೀತಿ ನಾನು ಯಾರಿಗೂ ಮಾಡಿಲ್ಲ. ನಿಮ್ಮ ನಟನೆ ನೋಡಿ ಬ್ಲ್ಯಾಂಕ್ ಆಗಿ ಬಿಟ್ಟೆ. ಈ ಚಿತ್ರದ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ ಎಂದು ಸೂರಜ್ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ