ರಿಷಿ ಗಂಗಾ ಪವರ್ ಪ್ರಾಜೆಕ್ಟ್ ಡ್ಯಾಮೇಜ್ | ಮುಳುಗುವ ಭೀತಿಯಲ್ಲಿ ಹಲವು ಜಿಲ್ಲೆಗಳು - Mahanayaka
9:57 PM Wednesday 5 - February 2025

ರಿಷಿ ಗಂಗಾ ಪವರ್ ಪ್ರಾಜೆಕ್ಟ್ ಡ್ಯಾಮೇಜ್ | ಮುಳುಗುವ ಭೀತಿಯಲ್ಲಿ ಹಲವು ಜಿಲ್ಲೆಗಳು

07/02/2021

ಉತ್ತರಾಖಂಡ: ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ರಿಷಿ ಗಂಗಾ  ವಿದ್ಯುತ್ ಯೋಜನೆಯ ಬಳಿ ಭೂಕಂಪನ ಸಂಭವಿಸಿದ್ದು, ಪರಿಣಾಮವಾಗಿ ಉಂಟಾದ ಹಿಮಪಾತದಿಂದಾಗಿ ಇಲ್ಲಿ ಹರಿಯುತ್ತಿರುವ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದ್ದು,  ಈ ಪ್ರದೇಶದಲ್ಲಿರುವ ಜನ ವಸತಿ ಪ್ರದೇಶಗಳು ಕೊಚ್ಚಿ ಹೋಗುವ ಆತಂಕ ಸೃಷ್ಟಿಯಾಗಿದೆ.

ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಗೊಳಿಸಲು ಈಗಾಗಲೇ ಆದೇಶವನ್ನು ನೀಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಚಮೋಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಐಟಿಪಿಬಿಯ ಎರಡು ತಂಡಗಳು, ಮೂರು ಎನ್ ಡಿಆರ್ ಎಫ್ ತಂಡಗಳು ಡೆಹ್ರಾಡೂನ್ ನಿಂದ ಧಾವಿಸಿದೆ. ಇನ್ನೂ ಸ್ಥಳೀಯ ಭದ್ರತಾ ಸಂಸ್ಥೆಗಳು ಕೂಡ ಸ್ಥಳಕ್ಕೆ ಧಾವಿಸಿ ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲು  ಮುಂದಾಗಿದೆ.

ಉತ್ತರಾಖಂಡದ ನಂದದೇವಿ ಹಿಮ ನದಿಯ ಒಂದು ಭಾಗ ಒಡೆದು ಹೋಗುವ ಸಾಧ್ಯತೆಗಳಿವೆ ಎಂದು ವಿಪತ್ತು ಎಚ್ಚರಿಕೆ ವರದಿ ಬಂದಿದ್ದು,  ಹೀಗಾಗಿ ಗಂಗಾ ನದಿಯ ಪ್ರವಹಿಸುವ ಜಿಲ್ಲೆಗಳಲ್ಲಿಯೂ ಹೈಅಲಾರ್ಟ್ ಘೋಷಿಸಲಾಗಿದೆ. ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ನೀರು ಬಿರುಸಾಗಿ ನುಗ್ಗುತ್ತಿದ್ದು, ಈ ಸಂಬಂಧ ಎಎನ್ ಐ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ನೀರು ಬಿರುಸಾಗಿ ಹರಿದು ಬರುತ್ತಿರುವುದು ಕಂಡು ಬಂದಿದೆ. ಈ ದೃಶ್ಯಗಳು ಭೀಕರವಾಗಿ ಕಂಡು ಬಂದಿದೆ.

ಇತ್ತೀಚಿನ ಸುದ್ದಿ