ಬಿಸಿ ಚಹಾದ ಜೊತೆಗೆ ರಸ್ಕ್ ತಿನ್ನೋದು ರಿಸ್ಕ್! | ಯಾಕೆ ಅಂತೀರಾ? ತಪ್ಪದೇ ಓದಿ
ಬಿಸಿ ಚಹಾದ ಜೊತೆಗೆ ರಸ್ಕ್(Rusk) ಬಿಸ್ಕೆಟ್ ತಿನ್ನುವುದು ಎಲ್ಲರಿಗೂ ಅಚ್ಚುಮೆಚ್ಚು ಆದ್ರೆ ಬಿಸ್ಕೆಟ್ ರಸ್ಕ್ ತಿನ್ನುವುದು ರಿಸ್ಕ್ ಅಂತ ಆರೋಗ್ಯ ತಜ್ಞರು ಹೇಳುತ್ತಾರೆ. ಅದಕ್ಕೆ ನಿಜವಾದ ಕಾರಣ ಏನು ಎನ್ನುವುದನ್ನು ತಿಳಿಯೋಣ ಬನ್ನಿ…(Health tips)
ರಸ್ಕ್ ಅನ್ನು ಹಿಟ್ಟು, ಸಕ್ಕರೆ ಮತ್ತು ಸಂಸ್ಕರಿಸಿದ ಎಣ್ಣೆಯ ಮಿಶ್ರಣವೆಂದು ಹೇಳಲಾಗುತ್ತದೆ . ಇದು ಬಹಳಷ್ಟು ಟ್ರಾನ್ಸ್ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಇದು ನಮ್ಮ ಹೃದಯದ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.
ರಸ್ಕ್ ಬಿಸ್ಕತ್ತುಗಳನ್ನು ಹೆಚ್ಚಾಗಿ ಹಳಸಿದ ಬ್ರೆಡ್ ನಿಂದ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ಒಳಗೊಂಡಿದೆ. ಸಂಸ್ಕರಿಸಿದ ಎಣ್ಣೆ ಇತ್ಯಾದಿಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು ಹೃದ್ರೋಗಕ್ಕೆ ಕಾರಣವಾಗಬಹುದಂತೆ.
ರಸ್ಕ್ ತರಬಹುದಾದ ರಿಸ್ಕ್ ಏನು?
ಪ್ರತಿ ದಿನವೂ ರಸ್ಕ್ ಸೇವನೆ ಮಾಡುವುದರಿಂದ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆಯ ವಾತಾವರಣ ಸೃಷ್ಟಿಸಿದಂತಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನ ಕುಂಠಿತಗೊಳಿಸುತ್ತಂತೆ. ರಸ್ಕ್ ನಲ್ಲಿರುವ ಅಂಶಗಳು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ತೂಕ ಹೆಚ್ಚಾಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ.
ಹಾಗಿದ್ರೆ ಏನೂ ತಿನ್ನಂಗಿಲ್ವಾ?
ರಸ್ಕ್, ಬಿಸ್ಕೆಟ್ ಎಲ್ಲವೂ ಆರೋಗ್ಯಕ್ಕೆ ಕೆಟ್ಟದಾದ್ರೆ ನಾವು ಚಹಾಕ್ಕೆ ಏನೂ ತಿನ್ನಂಗಿಲ್ವಾ? ಅಂತ ಸಾಕಷ್ಟು ಜನರು ಕೇಳಬಹುದು. ತಿನ್ನಬಹುದು ಅದು ಯಾವುದು ಅಂದ್ರೆ, ಹುರಿದ ಮಖಾನಾ, ಹುರಿದ ದಾಲ್ ಅಥವಾ ಬೀಜಗಳನ್ನು ತಿನ್ನಬಹುದು.. ಇವುಗಳು ಪೌಷ್ಟಿಕಾಂಶ ಮಾತ್ರವಲ್ಲದೆ ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: