ಸೌದಿಯಲ್ಲಿ ರಿಯಾದ್ ಮೆಟ್ರೋ ಮತ್ತಷ್ಟು ಜನಸ್ನೇಹಿ; ಏನ್ ಸ್ಪೆಷಲ್?
ಸೌದಿ ಅರೇಬಿಯಾದ ಪಾಲಿಗೆ ಬಹಳ ಮಹತ್ವಪೂರ್ಣ ಎಂದು ಹೇಳಲಾಗುತ್ತಿರುವ ರಿಯಾದ್ ಮೆಟ್ರೋ ಇದೀಗ ಮತ್ತಷ್ಟು ಜನಸ್ನೇಹಿಯಾಗಿದೆ. ಎರಡು ಸ್ಟೇಷನ್ ಗಳು ತೆರೆದುಕೊಂಡಿದ್ದು ಇದೀಗ ರಿಯಾದ್ ನ ಯಾವುದೇ ಸ್ಟೇಷನ್ನಲ್ಲಿ ನೀವು ಹತ್ತಿದರೂ ನಗರ ಕೇಂದ್ರವಾದ ಬತ್ತಹ್ ಗೆ ತಲುಪುತ್ತೀರಿ. ಬತ್ತಹ್ ನ ಅಲ್ ಬತ್ತಹ್ ನ್ಯಾಷನಲ್ ಸ್ಟೇಷನ್ ಗಳು ದಿನದ ಹಿಂದೆ ಚಟುವಟಿಕೆ ಪ್ರಾರಂಭಿಸಿವೆ.
ನಗರದ ಪೂರ್ವ ಪಶ್ಚಿಮ ಭಾಗಗಳನ್ನು ಜೋಡಿಸುವ ಬತಹ್ ನ ಮೂಲಕ ಸಾಗುವ 38 ಕಿಲೋಮೀಟರ್ ಉದ್ದದ ಬ್ಲೂ ಲೈನಲ್ಲಿ ಈ ಎರಡು ಸ್ಟೇಷನ್ ಗಳಿವೆ. ಪೂರ್ವ ಪಶ್ಚಿಮ ಭಾಗದ ಶಿಕ್ಷಣ ಸಚಿವಾಲಯದ ಮೂಲಕ ಸಾಗುವ 13 ಕಿಲೋಮೀಟರ್ ದೂರದ ಗ್ರೀನ್ ಲೈನ್ ನ ರೈಲು ಕೂಡ ನ್ಯಾಷನಲ್ ಮ್ಯೂಸಿಯಂ ಸ್ಟೇಷನನ್ನು ಸೇರುತ್ತಿದೆ. ಈ ಮೂಲಕ ನಗರದ ಯಾವುದೇ ಮೂಲೆಯಿಂದ ಟ್ರೈನ್ ಬಂದರು ಬತಹ್ ಗೆ ಸೇರುವ ಸನ್ನಿವೇಶ ನಿರ್ಮಾಣವಾಗಿದೆ.
ಹಾಗೆಯೇ ದಕ್ಷಿಣ ಮತ್ತು ಉತ್ತರ ಭಾಗವನ್ನು ಜೋಡಿಸುವ ಅತೀ ಉದ್ದದ ಗ್ರೀನ್ ಲೈನ್ ಕೂಡ ನೇರವಾಗಿ ಬತಹ್ ಗೆ ಬಂದು ಸೇರುತ್ತದೆ. ಪ್ರತಿದಿನ ಈ ದಾರಿಯ ಮೂಲಕ ನೂರ ತೊಂಬತ್ತು ಟ್ರೈನ್ ಗಳು ಸಂಚರಿಸುತ್ತಿವೆ. ಹೀಗೆ, 130 ಕಿಲೋಮೀಟರ್ ಸುತ್ತಳತೆಯ ರಿಯಾದ್ ಎಂಬ ಬೃಹತ್ ನಗರದ ಯಾವ ಮೂಲೆಯಿಂದ ಈ ಟ್ರೈನ್ನಲ್ಲಿ ಸಂಚರಿಸಿದರೂ ನೇರವಾಗಿ ಬತಹ್ ಗೆ ತಲುಪುವ ವ್ಯವಸ್ಥೆ ನಿರ್ಮಾಣವಾಗಿದೆ. ಅತ್ಯಂತ ನಿಭಿಡ ನಗರ ವೆಂದೇ ಗುರುತಿಸಿಕೊಂಡಿರುವ ಮತ್ತು ಟ್ರಾಫಿಕ್ ಸಮಸ್ಯೆಗಾಗಿಯೂ ಬೇಸತ್ತು ಕೊಂಡಿರುವ ಜನರಿಗೆ ಈ ರಿಯಾದ್ ಮೆಟ್ರೋ ಬಹಳ ಸುಲಭ ಪ್ರಯಾಣವನ್ನು ಒದಗಿಸುತ್ತಿದೆ. ಕೇವಲ ನಾಲ್ಕು ರಿಯಾಲ್ ನೀಡುವ ಮೂಲಕ ಯಾವುದೇ ಟ್ರಾಫಿಕ್ ನ ಸಮಸ್ಯೆಯನ್ನು ಎದುರಿಸದೆ ಬತಹ್ ಗೆ ತಲುಪುವ ಸುಲಭದ ದಾರಿಯಾಗಿ ರಿಯಾದ್ ಮೆಟ್ರೋ ಇದೀಗ ಜನರನ್ನು ಆಕರ್ಷಿಸುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj