ರಸ್ತೆಗಳು ಕತ್ರೀನಾ ಕೈಫ್ ಳ ಕೆನ್ನೆಯಂತೆ ನುಣುಪಾಗಿರಬೇಕು ಎಂದ ಸಚಿವ! - Mahanayaka

ರಸ್ತೆಗಳು ಕತ್ರೀನಾ ಕೈಫ್ ಳ ಕೆನ್ನೆಯಂತೆ ನುಣುಪಾಗಿರಬೇಕು ಎಂದ ಸಚಿವ!

katrina kaif
24/11/2021

ಜೈಪುರ: ನಮ್ಮ ಗ್ರಾಮದ ರಸ್ತೆಗಳು ಕತ್ರೀನಾ ಕೈಫ್ ಳ ಕೆನ್ನೆಯಂತೆ ನುಣುಪಾಗಿರಬೇಕು ಎಂದು ರಾಜಸ್ಥಾನದ ನೂತನ ಸಚಿವರೊಬ್ಬರು ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆ ಹಲವು ವಿಧದ ಚರ್ಚೆಗೆ ಕಾರಣವಾಗಿದ್ದು, ಸಚಿವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗಷ್ಟೇ ರಾಜಸ್ಥಾನ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಾಜೇಂದ್ರ ಸಿಂಗ್ ಗುಢಾ ಈ ಹೇಳಿಕೆ ನೀಡಿದ್ದು, ಗ್ರಾಮಗಳ ರಸ್ತೆಯ ಸ್ಥಿತಿಯ ಬಗ್ಗೆ ಜನರು ಸಚಿವರನ್ನು ಪ್ರಶ್ನಿಸಿದಾಗ, ಈ ಗ್ರಾಮದ ರಸ್ತೆಯನ್ನು ಕತ್ರೀನಾ ಕೈಫ್ ಗಲ್ಲದಂತೆ ನುಣುಪಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಸಚಿವರ ಹೇಳಿಕೆಯಿಂದ ಖುಷಿಗೊಂಡ ಗ್ರಾಮಸ್ಥರು ಜೋರಾಗಿ ಚಪ್ಪಾಳೆ ತಟ್ಟುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಆರಂಭದಲ್ಲಿ  ಸಚಿವರು ರಸ್ತೆಗೆ ಹೇಮಾ ಮಾಲಿನಿ ಅವರ ಕೆನ್ನೆಯಂತಾಗಬೇಕು ಎಂದು ಹೇಳಿದರು. ಆದರೆ, ಹೇಮಾಮಾಲಿನಿ ಅವರಿಗೆ ಈಗ ವಯಸ್ಸಾಗಿದೆ ಎಂದು ಕೆಲವರು ಸಚಿವರ ಗಮನಕ್ಕೆ ತಂದರು. ಈ ವೇಳೆ ಸಚಿವರು ಈಗ ಪ್ರಚಲಿತದಲ್ಲಿರುವ ನಟಿ ಯಾರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕತ್ರಿಕಾ ಕೈಫ್ ಹೆಸರನ್ನು ಕೆಲವರು ಹೇಳಿದ್ದಾರೆ. ಹೀಗಾಗಿ ಕತ್ರಿನಾ ಕೈಫ್ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕರ್ನಾಟಕದಾದ್ಯಂತ ದೊರೆತ ಭಾರೀ ಬೆಂಬಲಕ್ಕೆ ಮನತುಂಬಿ ಪತ್ರ ಬರೆದ ನಾದ ಬ್ರಹ್ಮ ಹಂಸಲೇಖ

ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್!

ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ: ಕೋಟ್ಯಾಂತರ ಮೌಲ್ಯದ ನಗ—ನಗದು ಪತ್ತೆ

ವಿದ್ಯುತ್ ಸ್ಪರ್ಶಿಸಿ ಯುವತಿಯ ದಾರುಣ ಸಾವು

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

ಶಾಕ್ ನೀಡಿದ ಪಾರ್ಲೆ—ಜಿ: ಪಾರ್ಲೆ ಉತ್ಪನ್ನಗಳ ಬೆಲೆ ಏರಿಕೆ

ಆಟೋ ತಡೆದು ಸಹೋದರರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಇತ್ತೀಚಿನ ಸುದ್ದಿ