ಚಿನ್ನಾಭರಣ ಕಣ್ಣೆದುರೇ ಇದ್ದರೂ ದರೋಡೆಕೋರ ಟಚ್ ಮಾಡಿಲ್ಲ: ಆ ರಾತ್ರಿ ಏನು ನಡೆಯಿತು? ಕರೀನಾ ಹೇಳಿದ್ದೇನು?
ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಸೈಫ್ ಮನೆಯ ಸದಸ್ಯರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈ ಪೈಕಿ ಸೈಫ್ ಪತ್ನಿ ಕರೀನಾ ಕಪೂರ್ ನೀಡಿರುವ ಹೇಳಿಕೆ ಚರ್ಚೆಗೀಡಾಗಿದೆ.
ದರೋಡೆಕೋರನ ಉದ್ದೇಶ ಏನಾಗಿತ್ತು ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ, ಕರೀನಾ ಹೇಳುವ ಪ್ರಕಾರ, ಮನೆಗೆ ನುಗ್ಗಿದ ದರೋಡೆಕೋರ ಮನೆಯಲ್ಲಿದ್ದ ಒಂದೇ ಒಂದು ಆಭರಣವನ್ನೂ ಟಚ್ ಮಾಡಿಲ್ಲವಂತೆ.
ಆಭರಣಗಳನ್ನು ಓಪನ್ ಆಗಿಯೇ ಇಟ್ಟಿದ್ವಿ, ಆದರೆ ದರೋಡೆಕೋರ ಯಾವುದೇ ಆಭರಣಗಳನ್ನು ಟಚ್ ಮಾಡಿಲ್ಲ, ಮನೆಯಲ್ಲಿ ಹೇಗೆ ಆಭರಣಗಳನ್ನು ಇಟ್ಟಿದ್ವೋ ಆದೇ ರೀತಿಯಲ್ಲಿ ಆಭರಣಗಳಿತ್ತು. ಅದು ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎನ್ನುವ ಅರ್ಥದಲ್ಲಿ ಕರೀನಾ ಹೇಳಿಕೆ ನೀಡಿದ್ದಾರೆ.
ಆಕ್ರಮಣವೇ ಉದ್ದೇಶವಾಗಿತ್ತೇ?
ಮನೆಗೆ ನುಗ್ಗಿದ್ದ ದರೋಡೆಕೋರ ಆಕ್ರಮಣಕಾರಿಯಾಗಿದ್ದ, ಆತ ಸೈಫ್ ಮೇಲೆ ಮೇಲಿಂದ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ ಮನೆಯೊಳಗೆ ನುಗ್ಗಿದರೂ ಆಭರಣ ಯಾವುದನ್ನೂ ಟಚ್ ಮಾಡಿಲ್ಲ ಎಂದು ಕರೀನಾ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸೈಫ್ ಮೇಲೆ ಹಲ್ಲೆ ಮಾಡುವ ಮೊದಲು ಮನೆಯ ಸಹಾಯಕಿಯ ಮೇಲೆ ಕೂಡ ದರೋಡೆಕೋರ ಹಲ್ಲೆ ಮಾಡಿದ್ದಾನೆ. ಘಟನೆ ನಡೆದ ದಿನ ಕರೀನಾ ಗರ್ಲ್ಸ್ ಪಾರ್ಟಿಗೆ ಜಾಯಿನ್ ಆಗಿದ್ದರು. ಹಾಗಾಗಿ ಅವರು ಮನೆಯಲ್ಲಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಸೈಫ್ ನ ದೇಹದ 6 ಭಾಗಕ್ಕೆ ದರೋಡೆಕೋರ ಚುಚ್ಚಿದ್ದಾನೆ. ಕತ್ತು, ಕೈ, ಬೆನ್ನು ಸೇರಿದಂತೆ ವಿವಿಧೆಡೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಗಾಯಗೊಂಡಿದ್ದ ಸೈಫ್ ನನ್ನು ಮಕ್ಕಳಿಬ್ಬರು ತಕ್ಷಣವೇ ಆಟೋ ಮೂಲಕ ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಇಷ್ಟು ಘಟನೆ ನಡೆದುಹೋಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: