ಮುನಿಸಿಕೊಂಡ ರಾಬರ್ಟ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ? - Mahanayaka
1:22 AM Tuesday 24 - December 2024

ಮುನಿಸಿಕೊಂಡ ರಾಬರ್ಟ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

29/01/2021

ಬೆಂಗಳೂರು: ಕನ್ನಡ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದ್ದಂತೆಯೇ ಇತರ ರಾಜ್ಯಗಳಲ್ಲಿ ರಾಬರ್ಟ್ ಬಿಡುಗಡೆಗೆ ಅಡ್ಡಿಯಾಗಿದೆ. ಇದರಿಂದಾಗಿ ಚಿತ್ರದ ನಟ “ಡಿಬಾಸ್”, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರದ ನಿರ್ದೇಶಕ ಉಮಾಪತಿ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.

ಆಂಧ್ರದಲ್ಲಿ ಕನ್ನಡ ಚಿತ್ರವಾಗಿರುವ ರಾಬರ್ಟ್ ಬಿಡುಗಡೆಯಾದರೆ, ಈಗಾಲೇ ಕ್ಯೂನಲ್ಲಿ ನಿಂತಿರುವ ತೆಲುಗು ಚಿತ್ರಗಳಿಗೆ ತೊಂದರೆಯಾಗುತ್ತದೆ. ರಾಬರ್ಟ್ ದಿನಾಂಕವನ್ನು ಮುಂದೂಡಿ ಎಂದು ಆಂಧ್ರದ ವಿತರಕರು ರಾಬರ್ಟ್ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ.

ತೆಲುಗು ಚಿತ್ರಗಳ ಪರ ಅಲ್ಲಿನ ಫಿಲ್ಮ್ ಚೇಂಬರ್ ನಿಲ್ಲುತ್ತೆ. ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಅಂದುಕೊಂಡ ಡೇಟ್​ಗೆ ರಿಲೀಸ್ ಆಗುತ್ತವೆ. ನಮ್ಮ ವಾಣಿಜ್ಯ ಮಂಡಳಿಯೂ ನಮ್ಮ ಪರ ನಿಂತು ಮಾತನಾಡಬೇಕು. ಪರಭಾಷಾ ಚಿತ್ರಗಳ ವಿರುದ್ಧ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಮಾಪತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿದರು.

ಮಾರ್ಚ್​ 11ರಂದು ರಾಬರ್ಟ್​ ಸಿನಿಮಾ ರಿಲೀಸ್​ ನಿರ್ಮಾಪಕರು ದಿನಾಂಕ ನಿಗದಿ ಮಾಡಿದ್ದಾರೆ. ಈ ನಡುವೆ ರಾಬರ್ಟ್ ಸಿನಿಮಾ ಬಿಡುಗಡೆಗೆ ಆಂಧ್ರದಲ್ಲಿ ಅಡ್ಡಿ ಉಂಟಾಗಿದೆ. ಸದ್ಯ ದರ್ಶನ್ ಹಾಗೂ ಅವರ ಉಮಾಪತಿ ಅವರ ದೂರಿನ ಹಿನ್ನೆಲೆಯಲ್ಲಿ  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ