ರೋಗಿಯ ಕಿಡ್ನಿಯ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ!
ಅಹ್ಮದಾಬಾದ್: ಮೂತ್ರಪಿಂಡದ ಕಲ್ಲು(Kidney Stone) ತೆಗೆಸಲು ಬಂದಿದ್ದ ರೋಗಿಯ ಕಿಡ್ನಿಯನ್ನೇ ವೈದ್ಯನೋರ್ವ ತೆಗೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಗ್ರಾಹಕ ವಿವಾದ ಪರಿಹಾರ ಆಯೋಗವು 11.23 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.
ಗುಜರಾತ್(Gujarat) ರಾಜ್ಯದ ಅಬ್ಮದಾಬಾದ್ ನ ಕೆಎಂಜಿ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಕಿಡ್ನಿ ಸ್ಟೋನ್ ತೆಗೆಯುವುದಾಗಿ ಕಿಡ್ನಿಯನ್ನೇ ತೆಗೆದಿದ್ದಾನೆ. ಇದರ ಪರಿಣಾಮವಾಗಿ ಚಿಕಿತ್ಸೆ ನಡೆದು ನಾಲ್ಕು ತಿಂಗಳ ಬಳಿಕ ರೋಗಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ರೋಗಿಯ ಸಂಬಂಧಿಕರು ಗ್ರಾಹಕ ವಿವಾದ ಪರಿಹಾರ ಆಯೋಗದ ಮೊರೆ ಹೋಗಿದ್ದು, ಪ್ರಕರಣ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆಸ್ಪತ್ರೆಯೇ ತನ್ನ ವೈದ್ಯನ ನಿರ್ಲಕ್ಷ್ಯಕ್ಕೆ ಹೊಣೆಯಾಗಿದೆ. ಉದ್ಯೋಗಿಯ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯೇ ಹೊಣೆಯಾಗಿದೆ. ಹೀಗಾಗಿ ಆಸ್ಪತ್ರೆಯು ಸಂತ್ರಸ್ತರ ಕುಟುಂಬಕ್ಕೆ 11.23 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದೆ.
ಇಲ್ಲಿನ ಖೇಡಾ ಜಿಲ್ಲೆಯ ವಾಂಘ್ರೋಲಿ ಗ್ರಾಮದ ದೇವೇಂದ್ರ ಭಾಯಿ ರಾವಲ್ ಅವರು ಬೆನ್ನು ನೋವು ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಬಾಲಸಿನೋರ್ ಪಟ್ಟಣದ ಕೆಎಂಜಿ ಜನರಲ್ ಆಸ್ಪತ್ರೆಯ ಡಾ.ಶಿವುಭಾಯಿ ಪಟೇಲ್ ಅವರನ್ನು ಭೇಟಿಯಾಗಿದ್ದರು. ಈ ಘಟನೆ ಮೇ 2011ರಲ್ಲಿ ನಡೆದಿದ್ದು, ಆ ದಿನ ರೋಗಿಯ ಎಡ ಮೂತ್ರಪಿಂಡದಲ್ಲಿ 14 ಎಂಎಂ ಕಲ್ಲು ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಹೇಳಿದ್ದರು. ಆದರೆ, 2011ರ ಸೆ.3ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ನಾವು ನಿಮ್ಮ ಆರೋಗ್ಯದ ಒಳಿತಿಗಾಗಿ ಕಿಡ್ನಿಯ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಬಳಿಕ ರೋಗಿ ಮತ್ತೆ ಅಸ್ವಸ್ಥರಾಗಿದ್ದರು. ಮತ್ತು ನಾಲ್ಕು ತಿಂಗಳ ಬಳಿಕ ಮೃತಪಟ್ಟಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!
ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್
ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ: ಸಿಎಂ ಬಸವರಾಜ್ ಬೊಮ್ಮಾಯಿ
ನಿಮ್ಮ ಮೆಚ್ಚಿನ ಮಹಾನಾಯಕ ಮಾಧ್ಯಮಕ್ಕೆ 1 ವರ್ಷದ ಸಂಭ್ರಮ
45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು?
ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ | ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು