ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಕಚ್ಚಿಕೊಂದ ಇಲಿ! - Mahanayaka

ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಕಚ್ಚಿಕೊಂದ ಇಲಿ!

mouse in hospital
24/06/2021

ಮುಂಬೈ: ಮದ್ಯ ವ್ಯಸನಿಯೋರ್ವ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಇಲಿ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮುಂಬೈನ ಗಾಟ್ಕೋಪರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

24 ವರ್ಷ ವಯಸ್ಸಿನ ಮದ್ಯ ವ್ಯಸನಿಯೋರ್ವ ಲಿವರ್ ಸಮಸ್ಯೆಯಿಂದ ಸಿವಿಕ್ ಆಸ್ಪತ್ರೆಗೆ ದಾಖಲಾಗಿದ್ದ.  ಆದರೆ, ಈ ಆಸ್ಪತ್ರೆಯಲ್ಲಿ ಇಲಿಗಳು ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಮೃತನ ಕಣ್ಣಿಗೆ ಇಲಿ ಕಚ್ಚಿ ಗಾಯ ಮಾಡಿದೆ. ಹೀಗಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ವೈದ್ಯರು,  ರೋಗಿಯ ಕಣ್ಣಿಗಾಗಲಿ, ದೇಹಕ್ಕಾಗಲಿ ಯಾವುದೆ ತೊಂದರೆ ಆಗಿಲ್ಲ. ಆದರೆ, ಲೀವರ್ ತೊಂದರೆಯಿಂದ ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ರೋಗಿಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಇದೊಂದು ವಿವಾದಿತ ಘಟನೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು  ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ