ರೋಹಿಣಿ ಸಿಂಧೂರಿ ಕಾನೂನು ಸಮರ: ಡಿ.ರೂಪಾ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟು ನೋಟಿಸ್

rohini sindhuri
23/02/2023

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ  ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ತಲುಪ್ಪಿದ್ದು ಈ ನಡುವೆ ವೈಯಕ್ತಿಕ ತೇಜೋವಧೆ ಆರೋಪದ ಮೇಲೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೋಹಿಣಿ ಸಿಂಧೂರಿ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಡಿ. ರೂಪಾ ಅವರಿಗೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ಮೂಲಕ ಲೀಗಲ್‌ ನೋಟಿಸ್‌  ನೀಡಿರುವ ರೋಹಿಣಿ ಸಿಂಧೂರಿ,ನೋಟಿಸ್‌ ನಲ್ಲಿ 21 ಅಂಶಗಳನ್ನು ಉಲ್ಲೇಖಿಸಿ ರೂಪಾ ಅವರ ಮನೆ ಹಾಗೂ ಕೆಲಸದ ಸ್ಥಳದ ವಿಳಾಸಕ್ಕೆ ಕಳುಹಿಸಿದ್ದಾರೆ. ಒಟ್ಟು 21 ಅಂಶಗಳ ಕ್ರಮ ವಹಿಸದಿದ್ದರೇ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೋಹಿಣಿ ಸಿಂಧೂರಿ ಅವರ ವಿರುದ್ದ ಡಿ.ರೂಪಾ ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭ್ರಷ್ಟಾಚಾರ ಆರೋಪ ಮಾಡಿ ಪೋಸ್ಟ್ ಮಾಡಿದ್ದರು. ಅಲ್ಲದೆ ವೈಯಕ್ತಿಕ ವಿಚಾರ ಕುರಿತು ಪೋಸ್ಟ್ ಮಾಡಿದ್ದರು. ಈ ಮಧ್ಯೆ ನಿನ್ನೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ಡಿ.ರೂಪಾ ಮೌದ್ಗಿಲ್  ಫೋನ್ ನಲ್ಲಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version