ರೋಹಿಣಿ ಸಿಂಧೂರಿ ಅನೇಕ ಸಂದರ್ಭ ಅಧಿಕ ಪ್ರಸಂಗತನದಿಂದ ಮಾತನಾಡಿದ್ದಾರೆ | ಎನ್.ಮಹೇಶ್ - Mahanayaka

ರೋಹಿಣಿ ಸಿಂಧೂರಿ ಅನೇಕ ಸಂದರ್ಭ ಅಧಿಕ ಪ್ರಸಂಗತನದಿಂದ ಮಾತನಾಡಿದ್ದಾರೆ | ಎನ್.ಮಹೇಶ್

n mahesh
04/06/2021

ಕೊಳ್ಳೇಗಾಲ: ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ತಿಕ್ಕಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು,  ಐಎಎಸ್ ಅಧಿಕಾರಿಗಳು ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಕೊಳ್ಳೇಗಾಲದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಅನೇಕ ಸಂದರ್ಭ ಅಧಿಕ ಪ್ರಸಂಗತನದಿಂದ ಮಾತನಾಡಿದ್ದಾರೆ. ಅಧಿಕಾರಿಗಳು ಮೊದಲು ಅಧಿಕಪ್ರಸಂಗದ ಮಾತುಗಳನ್ನಾಡಬಾರದು, ಮಾಧ್ಯಮಗಳ ಮುಂದೆಯೂ ಹೋಗಬಾರದು. ಕೊವಿಡ್ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಮಾಧ್ಯಮಗಳಿಗೆ ಹೋಗಲಿ, ಆದರೆ ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಗೆ ಮಾಹಿತಿ ನೀಡಲು ಮಾಧ್ಯಮದ ಬಳಿಗೆ ಹೋಗಬಾರದು ಎಂದು ಅವರು ಸಲಹೆ ನೀಡಿದರು.

ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಬಳಿಕ ಮಾಧ್ಯಮಗಳಲ್ಲಿ ಮೈಸೂರು ಜಿಲ್ಲಾಧಿಕಾರಿ ಆರೋಪ ಮುಕ್ತ ಎಂದು ವರದಿಯಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಚಾಮರಾಜನಗರದವರು ಮೈಸೂರಿನ ಜನರಿಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿಕೆ ನೀಡಿದ್ದರು.  ಕ್ಷಮೆ ಕೇಳಲು ಇವರೇನು ಮೈಸೂರಿನ ಮಹಾರಾಜರೇ? ಎಂದು ಅವರು ಪ್ರಶ್ನಿಸಿದರು.

ಶಿಲ್ಪಾನಾಗ್ ರಾಜೀನಾಮೆ ವಿಚಿತ್ರವಾಗಿದೆ. ಇದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದೂ ವಿಚಿತ್ರವಾಗಿದೆ. ಈ ಇಬ್ಬರು ಅಧಿಕಾರಿಗಳಿಗೂ ಬುದ್ಧಿ ಹೇಳಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇಂತಹ ಘಟನೆ ಯಾವ ಜಿಲ್ಲೆಯಲ್ಲಿಯೂ ಈ ರೀತಿಯ ಘಟನೆ ಮರುಕಳಿಸಬಾರದು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ