ಬಿಲ್ಲವ ಸಂಘಟನೆಗಳ ವಿರೋಧದ ನಡುವೆಯೂ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ ರೋಹಿತ್ ಚಕ್ರತೀರ್ಥ - Mahanayaka
3:22 AM Wednesday 4 - December 2024

ಬಿಲ್ಲವ ಸಂಘಟನೆಗಳ ವಿರೋಧದ ನಡುವೆಯೂ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ ರೋಹಿತ್ ಚಕ್ರತೀರ್ಥ

rohit chakrathirtha
28/02/2023

ಬೆಳ್ತಂಗಡಿ: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಕೆಲವು ಬಿಲ್ಲವ ಹಾಗೂ ದಲಿತ  ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಸೋಮವಾರ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

ಶಾಸಕ ಹರೀಶ್ ಪೂಂಜ  ನೇತೃತ್ವದಲ್ಲಿ ಕಾರ್ಯಕರ್ತರು ರೋಹಿತ್ ಚಕ್ರತೀರ್ಥ ಅವರನ್ನು ಸ್ವಾಗತಿಸಿದರು. ಇದೇ ವೇಳೆ ದೇವಸ್ಥಾನದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ರೋಹಿತ್ ಚಕ್ರತೀರ್ಥ, ಈ ದೇವಸ್ಥಾನಕ್ಕೆ ಬರಲು ಮಹಾಲಿಂಗೇಶ್ವರ ದೇವರು ಒಂದು ಕಾರಣವಾದರೆ, ಮತ್ತೊಂದು ಕಾರಣ ಹರೀಶ್ ಪೂಂಜ ಅವರಾಗಿದ್ದಾರೆ . ಅವರು ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭ ನಡೆದ ಅನೇಕ ಘಟನಾವಳಿಗಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತಿದ್ದರು ಎಂದರು.

ಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥರು ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ್ದೂ, ಅವರನ್ನು ‘ಶಿಕ್ಷಣ ಮತ್ತು ಧರ್ಮ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ವೇಣೂರು ದೇವಸ್ಥಾನದ ಸಮಿತಿಯವರು ಕರೆಯಬಾರದು. ಅವರ ಉಪನ್ಯಾಸಕ್ಕೆ ಅವಕಾಶ ಕೊಡಬಾರದೆಂದು ಕೆಲ ಬಿಲ್ಲವ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳಿ ಆಗ್ರಹಿಸಿದ್ದವು.

ಅಳದಂಗಡಿ ಅರಸರಾದ ಡಾ.ಪದ್ಮಪ್ರಸಾದ ಅಜಿಲ ಅವರು ಮದ್ಯಪ್ರವೇಶಿಸಿ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದರು. ಉಪನ್ಯಾಸ ರದ್ದಾಗಿ ಸಮಸ್ಯೆಯೂ ಪರಿಹಾರಗೊಂಡಿತ್ತು. ಉಪನ್ಯಾಸಕ್ಕೆ ರೋಹಿತ್ ಚಕ್ರ ತೀರ್ಥ ಆಗಮಿಸಿರಲಿಲ್ಲ. ಅದರೆ ಅಪರಾಹ್ನ ಅವರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಉಪನ್ಯಾಸ ರದ್ದಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಸಂಘಟನೆಗಳು ವಿರೋಧವನ್ನ ವ್ಯಕ್ತಪಡಿಸಲಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ