ಸಿದ್ದರಾಮಯ್ಯ ರೋಹಿತ್ ಚಕ್ರ ತೀರ್ಥನ ಬಂಧನಕ್ಕೆ ಕರೆ ನೀಡಿದ್ದು ಅಸಂವಿಧಾನಿಕ: ನಟ ಚೇತನ್
ಬೆಂಗಳೂರು: ಸಿದ್ಧರಾಮಯ್ಯನವರು ಚಕ್ರತೀರ್ಥನ ಬಂಧನಕ್ಕೆ ಆಗ್ರಹ ನೀಡಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ವಿರೋಧಿಯಾಗಿದ್ದು ಅಸಂವಿಧಾನಿಕವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಚಿತ್ರನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಎಂದಿನಂತೆ ಅಪಮಾನಿಸುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದ್ದು, ಗಾಂಧಿ (ಬೋಸ್ ಚುನಾವಣೆ ’39) , ಇಂದಿರಾ ಗಾಂಧಿ (ತುರ್ತು ಪರಿಸ್ಥಿತಿ ’75+), ನರಸಿಂಹ ರಾವ್ (ಕುದುರೆ ವ್ಯಾಪಾರ ’91+) ಎಂಬ ವಿಚಾರಗಳನ್ನು ಪ್ರಸ್ತಾಪಿಸಿರುವ ಅವರು, ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಪ್ರಜಾ ಪ್ರಭುತ್ವವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇವತ್ತಿನ ಪಠ್ಯಪುಸ್ತಕ ಪ್ರತಿಭಟನೆ ಸಮಾನತೆ ಮತ್ತು ನ್ಯಾಯಪರ ಹೋರಾಟ ಅಲ್ಲ- ಇದು ಕಾಂಗ್ರೆಸ್ ಮತ್ತು ಬ್ರಾಹ್ಮಣ್ಯದ ಸವಲತ್ತುಗಳನ್ನು ಉಳಿಸಿಕೊಳ್ಳುವ ಹೋರಾಟ
ಕಾಂಗ್ರೆಸ್ ಬೆಂಬಲಿತ ಪಠ್ಯಪುಸ್ತಕಗಳೂ ಬಿಜೆಪಿ ಬೆಂಬಲಿತ ಪ್ರಸ್ತುತ ಪಠ್ಯಪುಸ್ತಕಗಳೂ ಎರಡರಲ್ಲೂ ನಿಜವಾದ ಸಮಾನತಾವಾದಕ್ಕೆ (ಅಂಬೇಡ್ಕರ್-ಪೆರಿಯಾರ್ವಾದ) ನ್ಯಾಯ ಒದಗಿಸಿಲ್ಲ ಎಂದು ಚೇತನ್ ಟೀಕಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೆಯ ಸ್ಥಾನ
ಗುರುದ್ವಾರದಲ್ಲಿ ಸ್ಫೋಟ: ಇಬ್ಬರು ಸಾವು, ಹಲವರನ್ನು ಒತ್ತೆಯಾಳಾಗಿಸಿದ ಉಗ್ರರು
ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮನೆಗೆ ಎಸಿಬಿ ದಾಳಿ: ಸಿಕ್ಕಿದ ಚಿನ್ನಾಭರಣಗಳೆಷ್ಟು ಗೊತ್ತಾ?