ರಾಜಸ್ಥಾನದಲ್ಲಿ ಮೂರನೇ ಭಾಷೆ ಉರ್ದುವಿಗೆ ಕತ್ತರಿ: ಸಂಸ್ಕೃತಕ್ಕೆ 3ನೇ ಸ್ಥಾನಮಾನ

ರಾಜಸ್ಥಾನದ ಶಾಲೆಗಳಲ್ಲಿ ಈವರೆಗೆ ಮೂರನೇ ಭಾಷೆಯಾಗಿ ಉರ್ದುವನ್ನು ಕಲಿಸಲಾಗುತ್ತಿದ್ದು ಇದೀಗ ಈ ಉರ್ದುವಿಗೆ ಕತ್ತರಿ ಹಾಕಲಾಗಿದೆ. ಮೂರನೇ ಭಾಷೆಯಾಗಿ ಉರ್ದುವಿನ ಜಾಗಕ್ಕೆ ಸಂಸ್ಕೃತವನ್ನು ತರಲು ರಾಜಸ್ಥಾನ ಸರಕಾರ ನಿರ್ಧರಿಸಿದೆ. ಈ ಕ್ರಮ ತೀವ್ರ ವಿವಾದಕ್ಕೂ ಕಾರಣವಾಗಿದೆ.
ಈಗಾಗಲೇ ಮೂರನೇ ಭಾಷೆಯಾಗಿ ಉರ್ದುವನ್ನು ಆಯ್ಕೆ ಮಾಡಿಕೊಂಡಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಇದು ತೀವ್ರ ಸಮಸ್ಯೆಯನ್ನು ಉಂಟು ಮಾಡಲಿದೆ ಎಂದು ಹೇಳಲಾಗಿದೆ.
ಇದೇ ವೇಳೆ ರಾಜಸ್ಥಾನದ ಸಚಿವ ಜವಾಹರ್ ಸಿಂಗ್ ಬದಾಮ್ ಅವರ ಹೇಳಿಕೆಯು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.. ರಾಜಸ್ಥಾನದಲ್ಲಿ ಉರ್ದು ಟೀಚರ್ಸ್ ಗಳು ನಕಲಿ ಸರ್ಟಿಫಿಕೇಟ್ ನೊಂದಿಗೆ ಆಯ್ಕೆಯಾಗಿದ್ದಾರೆ ಮತ್ತು ಈ ಹಿಂದಿನ ಕಾಂಗ್ರೆಸ್ ಸರಕಾರ ಸಂಸ್ಕೃತ ಟೀಚರ್ ಗಳನ್ನು ಕಿತ್ತುಹಾಕಿ ಅವರ ಜಾಗದಲ್ಲಿ ಉರ್ದು ಟೀಚರ್ಸ್ ಗಳನ್ನು ನೇಮಿಸಿತ್ತು ಎಂದವರು ಹೇಳಿದ್ದಾರೆ.
ಇದೇ ವೇಳೆ ಜೈಪುರದ ಮಹಾತ್ಮ ಗಾಂಧಿ ಸರಕಾರಿ ಶಾಲೆಯಲ್ಲಿ ಹಾಗೂ ಬಿಕನೇರ್ ನ ಗೌರ್ಮೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ ಉರ್ದು ತರಗತಿಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಎರಡು ಶಾಲೆಗಳಲ್ಲಿ ಉರ್ದು ಕಲಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಉರ್ದು ಕಲಿಕೆಯ ಜಾಗಕ್ಕೆ ಸಂಸ್ಕೃತ ಟೀಚರ್ ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಅದೇ ವೇಳೆ ಈ ಎರಡು ಶಾಲೆಗಳಲ್ಲಿ ಉರ್ದು ಕಲಿಕೆಗೆ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ ಮತ್ತು ಸಂಸ್ಕೃತ ಕಲಿಕೆಗೆ ಬಾರಿ ಬೇಡಿಕೆ ಇದೆ ಎಂದು ಸರ್ಕಾರ ಸಮರ್ಥಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj