ತಲ್ವಾರ್ ಝಳಪಿಸುತ್ತಾ ವ್ಹೀಲಿಂಗ್ ಮಾಡಿದ್ದ ಆರೋಪಿಗಳ ವಿರುದ್ಧ ರೌಡಿಶೀಟ್

ಬೆಂಗಳೂರು: ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ, ತಲ್ವಾರ್ ಝಳಪಿಸಿದ್ದ 14 ಪುಂಡರ ವಿರುದ್ಧ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಷಬೇ—ಎ—ಬಾರತ್ ಧಾರ್ಮಿಕ ಹಬ್ಬದ ದಿನ ಕೆಲವು ಪುಂಡರು ಡಿಜೆ ಹಳ್ಳಿಯಿಂದ ಹೊಸಕೋಟೆ ವರೆಗೆ ಹೋಗಿ, ಮತ್ತೆ ವಾಪಸ್ ಡಿಜೆ ಹಳ್ಳಿಗೆ ಮಾರಕಾಸ್ತ್ರಗಳನ್ನು ಹಿಡಿದ ವ್ಹೀಲಿಂಗ್ ಮಾಡಿದ್ದರು.
ಪುಂಡಾಟ ಮೆರೆದಿದ್ದ ನಯೀಮ್ ಪಾಷಾ, ಅರಫತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಅಫ್ತಾಪ್ ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್ಲ 14 ಮಂದಿಯ ವಿರುದ್ಧವೂ ರೌಡಿಶೀಟ್ ತೆರೆಯಲಾಗಿದೆ. ಅಲ್ಲದೇ ಆರೋಪಿಗಳ ಪೋಷಕರನ್ನು ಕರೆಯಿಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಪ್ರಕರಣ ಸಂಬಂಧ ಪೊಲೀಸರು ಕಠಿಣ ಕ್ರಮಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7