ಎರಡನೇ ರಾಣಿ ಎಲಿಜಬೆತ್ ಪತಿ ನಿಧನ | ಅರಮನೆಯ ಅಧಿಕೃತ ಪ್ರಕಟಣೆ

prince philip
09/04/2021

ಲಂಡನ್:  ಎರಡನೇ ರಾಣಿ ಎಲಿಜಬೆತ್ ಅವರ ಪತಿ ರಾಜ ಫಿಲಿಪ್ ತಮ್ಮ 99ನೇ ವರ್ಷ ವಯಸ್ಸಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು  ಬಕಿಂಗ್ಲ್ಯಾಮ್ ಅರಮನೆ ಪ್ರಕಟಣೆ ತಿಳಿಸಿದೆ.

99 ವರ್ಷದ ರಾಜ ಫಿಲಿಪ್ ಅವರು ಇತ್ತೀಚೆಗಷ್ಚೇ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಒಳಗಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಿಟೀಷ್ ಅರಸೊತ್ತಿಗೆಯನ್ನು ಅತೀ ಹೆಚ್ಚು ವರ್ಷ ಆಳಿದ ಫಿಲಿಪ್, 2017 ರಲ್ಲಿ ಸಾರ್ವಜನಿಕ ಜೀವನಕ್ಕೆ ವಿದಾಯ ಹೇಳಿದ್ದರು. ಜೂನ್ 10 ಕ್ಕೆ ಅವರು ನೂರು ವರ್ಷಗಳನ್ನು ಪೂರೈಸಲಿದ್ದರು. ಆದರೆ ಈ ನಡುವೆ  ಅವರು ನಿಧನರಾಗಿದ್ದಾರೆ.

ಇನ್ನೂ ಪಿಲಿಫ್ ನಿಧನಕ್ಕೆ ರಾಣಿ ಎಲಿಜೇಬತ್ ಅವರು ಕಂಬನಿ ಮಿಡಿದಿದ್ದು, ಬ್ರಿಟನ್​ನಲ್ಲಿ ಮೂರು ದಿನ ಶೋಕಾಚರಣೆಗೆ ಕರೆ ನೀಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version