ಆರೆಸ್ಸೆಸ್ ಮತ್ತು ಬಿಜೆಪಿ ವಿಷ ಇದ್ದಂತೆ: ಮಲ್ಲಿಕಾರ್ಜುನ ಖರ್ಗೆ

mallikarjuna kharge
02/04/2021

ಚೆನ್ನೈ: ಆರೆಸ್ಸೆಸ್ ಮತ್ತು ಬಿಜೆಪಿ ವಿಷ ಇದ್ದಂತೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು,  ಈ ವಿಷಕಾರಿ ಸಿದ್ಧಾಂತಮಿಳುನಾಡು ಹಾಗೂ ಪುದುಚೇರಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್ ಮತ್ತು ಬಿಜೆಪಿ ವಿಷವಿದ್ದಂತೆ, ಒಂದು ವೇಳೆ ನಿಮಗೂ ಅವುಗಳ ರುಚಿ ಹಿಡಿಸಿದರೆ, ನೀವು ಕೂಡಾ ಖಂಡಿತವಾಗಿ ಸಾಯುತ್ತೀರಿ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದರು.

ಆರ್ ಎಸ್ ಎಸ್ ಹಾಗೂ ಬಿಜೆಪಿ ಹೇಗೂ ಕರ್ನಾಟಕ ತಲುಪಿದ್ದಾರೆ ಆದರೆ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ವಿಷಕಾರಿ ಸಿದ್ಧಾಂತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಜನತೆಯಲ್ಲಿ ಅವರು ಮನವಿ ಮಾಡಿಕೊಂಡರು.

ಇತ್ತೀಚಿನ ಸುದ್ದಿ

Exit mobile version