ಆರೆಸ್ಸೆಸ್ ನವರು ಭಾರತೀಯರಾ? ದ್ರಾವಿಡರಾ?: ಸಿದ್ದರಾಮಯ್ಯ ಪ್ರಶ್ನೆ - Mahanayaka

ಆರೆಸ್ಸೆಸ್ ನವರು ಭಾರತೀಯರಾ? ದ್ರಾವಿಡರಾ?: ಸಿದ್ದರಾಮಯ್ಯ ಪ್ರಶ್ನೆ

siddaramaiha
27/05/2022

ಬೆಂಗಳೂರು: ಬಿಜೆಪಿ ಸರ್ಕಾರ ಬಂದ ಮೇಲೆ ಯಾವ ಚರಿತ್ರೆಯನ್ನು ಓದಿಕೊಳ್ಳಬೇಕು ಎನ್ನುವುದೇ ಕಷ್ಟವಾಗಿದೆ. ಆರೆಸ್ಸೆಸ್ ನವರು ಮೂಲತಃ ಭಾರತದವರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಆರೆಸ್ಸೆಸ್ ನವರು ಮೂಲತಃ ಭಾರತದವರಾ? ಆರೆಸ್ಸೆಸ್ ನವರು ದ್ರಾವಿಡರಾ? ನಾವು ಅದೆಲ್ಲ ಚರ್ಚೆ ಮಾಡುವುದು ಬೇಡ ಅಂತಿದ್ದೇವೆ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಅಂಬೇಡ್ಕರ್ ಅವರು ಹೇಳಿದ್ದೇನಂದ್ರೆ, ಯಾರು ಚರಿತ್ರೆಯನ್ನು ತಿಳಿದುಕೊಳ್ಳುವುದಿಲ್ವೋ ಅವರು ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಂತ.  ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಯಾವ ಚರಿತ್ರೆಯನ್ನು ಓದಿಕೊಳ್ಳಬೇಕು ಎನ್ನುವುದೇ ಕಷ್ಟಕರವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ನೆಹರೂ ಹಾಗೂ ಈಗಿನ ಪ್ರಧಾನಿಯನ್ನು ಹೋಲಿಕೆ ಮಾಡಿ ಮಾತನಾಡಲು ಸಾಧ್ಯವಿಲ್ಲ. ಯಾಕೆಂದರೆ, ನೆಹರೂ ಅವರು ಮಾಧ್ಯಮದವರು ಯಾವ ಪ್ರಶ್ನೆ ಕೇಳಿದರೂ ಅದಕ್ಕೆ ಮನ್ನಣೆ ಕೊಟ್ಟು ಸಮರ್ಥವಾಗಿ ಉತ್ತರಿಸುತ್ತಿದ್ದರು. ಇವತ್ತಿನ ಪ್ರಧಾನಿಗೂ ನೆಹರೂಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ನೆಹರೂ ಎಲ್ಲಿ, ನರೇಂದ್ರ ಮೋದಿ ಎಲ್ಲಿ? ಎಂದು ವ್ಯಂಗ್ಯವಾಡಿದ ಅವರು, ಭೂಮಿಗೂ ಆಕಾಶಕ್ಕೂ ಇರುವಷ್ಟು ವ್ಯತ್ಯಾಸ ಎಂದರು.

ನೆಹರೂ ಅವರು ಮಾಡಿದ ಎಲ್ಲ ಒಳ್ಳೆಯ ಕೆಲಸಗಳನ್ನು ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ್ದ ಐಎಎಸ್ ಅಧಿಕಾರಿ ದಂಪತಿ ವರ್ಗಾವಣೆ

ಸೇನೆಯ ವಾಹನ ನದಿಗೆ ಉರುಳಿ 7 ಯೋಧರು ಹುತಾತ್ಮರಾಗಿದ್ದು, 19 ಮಂದಿ ಗಾಯ

ಮೂತ್ರದಿಂದ ತಯಾರಾಗುವ ಬಿಯರ್: ಸೂಪರ್‌ ಟೇಸ್ಟ್ ಎನ್ನುತ್ತಿದ್ದಾರೆ ಮದ್ಯಪಾನಿಗಳು!

ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

ಬ್ಲಡ್ ಬ್ಯಾಂಕ್ ನಿಂದ ರಕ್ತ ಪಡೆದ ನಾಲ್ಕು ಮಕ್ಕಳಿಗೆ ಎಚ್ ಐವಿ:  ಒಂದು ಮಗು ಸಾವು

ಇತ್ತೀಚಿನ ಸುದ್ದಿ