ಈ ಕೆಫೆಗೆ ಪುರುಷರಿಗೆ ನೋ ಎಂಟ್ರಿ | ಮಹಿಳೆಯರ ಈ ಕೆಫೆಯಲ್ಲಿ ಅಂತಹದ್ದೇನಿರುತ್ತೆ ಗೊತ್ತಾ?

02/11/2020

ಯೆಮೆನ್: ಮಹಿಳೆಯರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ವಿಶ್ರಾಂತಿ ತಾಣಗಳು ಬಹಳ ಅಗತ್ಯವಾಗಿದೆ ಎಂದು ಅರಿತ ಮಹಿಳೆಯೊಬ್ಬರು, ಕೇವಲ ಮಹಿಳೆಯರಿಗಾಗಿ ಮಾತ್ರವೇ ಸ್ವಂತ ಕೆಫೆಯೊಂದನ್ನು ನಿರ್ಮಿಸಿದ್ದಾರೆ.


ಯೆಮೆನ್ ಸಿಟಿಯಲ್ಲಿ ಈ ಕೆಫೆ ಆರಂಭಿಸಲಾಗಿದೆ. ಮಹಿಳೆಯರು ಹೊರಗೆ ಕೆಲಸಕ್ಕೆ ಹೋಗುವುದೇ ತಪ್ಪು ಎನ್ನುವ ಸ್ಥಿತಿ ಇರುವ ಸಂದರ್ಭದಲ್ಲಿ ನಾನು ಮಹಿಳೆಯರಿಗಾಗಿಯೇ ತೆರೆದಿರುವ ಕೆಫೆಯನ್ನು ನೋಡಿ ಕೆಲವರಿಗೆ ವಿಚಿತ್ರ ಅನ್ನಿಸಬಹುದು ಎಂದು ಕೆಫೆಯ ಮಾಲಕಿ ಯುಎಂ ಫೆರಸ್ ಹೇಳಿದ್ದಾರೆ.


ಯೆಮೆನ್ ನಗರದ ಕೇಂದ್ರ ಭಾಗದಲ್ಲಿಯೇ ಈ ಕೆಫೆ ಇದೆ.  ಕಳೆದ ವರ್ಷ ಏಪ್ರಿಲ್ ನಲ್ಲಿ ಇವರು ಈ ಕೆಫೆ ಆರಂಭಿಸಿದ್ದರು. ಇಲ್ಲಿಗೆ ಕೇವಲ ಮಹಿಳೆಯರಿಗೆ ಮಾತ್ರವೇ ಇಂಟ್ರಿ ಇದೆ. ಪುರುಷರಿಗೆ ನೋ ಎಂಟ್ರಿ.


ಇದು ಯೆಮೆನ್ ನಗರದ ಮಹಿಳೆಯರ ಅತ್ಯುತ್ತಮ ವಿಶ್ರಾಂತಿ ತಾಣವಾಗಿದೆ. ಮಹಿಳೆಯೊಬ್ಬಳೂ ಮಹಿಳೆಗೆ ವಿಶ್ರಾಂತಿಗೆ ಜಾಗ ಕೊಡುವುದು ಮಾತ್ರವೇ ಅಲ್ಲ ಅದರಿಂದ ಉದ್ಯಮಿಯೂ ಆಗಬಲ್ಲಲು  ಎಂದು ಫೆರಸ್ ಹೇಳುತ್ತಾರೆ.


ಇತ್ತೀಚಿನ ಸುದ್ದಿ

Exit mobile version