“ಓಡು ಕೊರೊನಾ ಓಡು” ಎಂದು ಪಂಜು ಹಿಡಿದು ಓಡಿದ ಗ್ರಾಮಸ್ಥರು!

22/04/2021
ಭೋಪಾಲ್: ರಾತ್ರಿಯ ವೇಳೆ ಓಡು ಕೊರೊನಾ ಓಡು ಎಂದು ಜನರು ಪಂಜು ಹಿಡಿದು ಓಡಿದ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದ್ದು, ಇಡೀ ವಿಶ್ವವೇ ಕೊರೊನಾ ವಿರುದ್ಧ ವಿಜ್ಞಾನದ ಆಧಾರದಲ್ಲಿ ಹೋರಾಡುತ್ತಿದ್ದರೆ, ಭಾರತದಲ್ಲಿ ಇಂತಹ ಅಸ್ವಾಭಾವಿಕ ಹಾಗೂ ಮೌಢ್ಯದ ಅತಿರೇಕಗಳು ಪದೇ ಪದೇ ಕಂಡು ಬರುತ್ತಿದೆ.
ವಿಡಿಯೋವೊಂದು ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪಂಜು ಹಿಡಿದುಕೊಂಡು ಓಡಿದ ಗ್ರಾಮಸ್ಥರು, ಓಡು ಕೊರೊನಾ ಓಡು ಎಂದು ಜೋರಾಗಿ ಬೊಬ್ಬೆ ಹಾಕುತ್ತಾ, ಕೈಯಲ್ಲಿದ್ದ ಪಂಜನ್ನು ಗಾಳಿಯಲ್ಲಿ ಎಸೆದಿದ್ದಾರೆ.
ಈ ರೀತಿಯ ಆಚರಣೆಯಿಂದ ಕೊರೊನಾ ಬರುವುದಿಲ್ಲ ಎನ್ನುವುದು ಈ ಗ್ರಾಮಸ್ಥರ ಮೂಢ ನಂಬಿಕೆಯಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಟ್ಟೆ, ಜಾಗಟೆ, ಚಪ್ಪಾಳೆ ತಟ್ಟಲು ಕರೆ ನೀಡಿ ಇಡೀ ವಿಶ್ವವೇ ಭಾರತವನ್ನು ನೋಡಿ ನಗುವಂತಾಗಿತ್ತು. ಇದೀಗ ಗ್ರಾಮಸ್ಥರ ನಡವಳಿಕೆ ಆ ಘಟನೆಯನ್ನು ಮತ್ತೆ ನೆನಪಿಸಿದೆ.