ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ
ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಭಾರತದಲ್ಲಿ ಮತ್ತೆ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದ್ದು, ಬೆಂಗಳೂರು ನಗರದಲ್ಲಿ ಅಡುಗೆ ಎಣ್ಣೆ ಬೆಲೆ 200 ರೂಪಾಯಿಯ ಸನಿಹಕ್ಕೆ ತಲುಪಿದೆ.
ಇತ್ತೀಚೆಗಷ್ಟೇ ಅಡುಗೆ ಎಣ್ಣೆಗೆ ಭಾರೀ ಬೆಲೆ ಏರಿಕೆಯಾಗಿ ಮತ್ತೆ ದರ ಇಳಿಕೆಯಾಗಿತ್ತು. ಆದರೆ, ಇದೀಗ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದಾಗಿ ಅಡುಗೆ ಎಣ್ಣೆ ದರ ಏರಿಕೆ ಅನಿವಾರ್ಯವಾಗಿದೆ ಎನ್ನುವ ನೆಪದಲ್ಲಿ ಮತ್ತೊಮ್ಮೆ ಅಡುಗೆ ಎಣ್ಣೆ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ಆಕ್ರೋಶಗಳು ಕೂಡ ಕೇಳಿ ಬಂದಿದೆ.
ಸೂರ್ಯಕಾಂತಿ ಎಣ್ಣೆಯ ದರ ಲೀಟರ್ ಗೆ 40 ರೂಪಾಯಿ ಏರಿಕೆಯಾಗಿದೆ. ಇನ್ನೊಂದೆಡೆ ಬೆಲೆ ಏರಿಕೆ ಮಾಡುವ ಉದ್ದೇಶದಿಂದ ಅಡುಗೆ ಎಣ್ಣೆಯ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಅನುಮಾನಗಳು ಕೂಡ ಸಾರ್ವಜನಿಕರನ್ನು ಕಾಡುತ್ತಿದ್ದು, ಬೆಂಗಳೂರಿನ ಕೆಲವೆಡೆಗಳಲ್ಲಿ ಅಡುಗೆ ಎಣ್ಣೆ ಖರೀದಿಗೆ ಮಿತಿ ನಿಗದಿ ಪಡಿಸಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಉಕ್ರೇನ್-ರಷ್ಯಾ ಯುದ್ಧ ಅಡುಗೆ ಎಣ್ಣೆ ಹಾಗೂ ತೈಲ ಬೆಲೆ ಏರಿಕೆಗೆ ಸರ್ಕಾರಕ್ಕೆ ಸಿಕ್ಕಿರುವ ಹೊಸ ಆಯುಧವಾಗದಿರಲಿ. ಸರ್ಕಾರ ಜನರಿಗೆ ಈಗಾಗಲೇ ಸಾಕಷ್ಟು ಹೊರೆಗಳನ್ನು ಹಾಕಿದೆ. ಜನರು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಾನೇ ಹೊರೆ ತೆಗೆದುಕೊಂಡು ಜನರಿಗೆ ಸಹಕಾರಿಯಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: 11 ವರ್ಷದ ಬಾಲಕನ ದಾರುಣ ಸಾವು
ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ ಐವರು ಸಜೀವ ದಹನ
ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮಭೂಮಿಗಾಗಿ ಹೋರಾಡಿದ ಧರ್ಮಶೀಲ ಭಂತೇಜಿ
ಆಸ್ತಿಗಾಗಿ ತಂದೆಯನ್ನು ಭೀಕರವಾಗಿ ಹತ್ಯೆಗೈದ ಪುತ್ರ: ಬೆಚ್ಚಿ ಬಿದ್ದ ಗ್ರಾಮಸ್ಥರು
ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಆಗಬಾರದು: ಗೃಹ ಸಚಿವ ಆರಗ ಜ್ಞಾನೇಂದ್ರ