ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ - Mahanayaka
9:27 AM Wednesday 5 - February 2025

ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ

sa ra mahesh rohini sindhuri
04/09/2021

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಹೊಸ ತಿರುವು ದೊರೆತಿದ್ದು,  ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಲು ಭೂದಾಖಲೆಗಳ ಆಯುಕ್ತ ಸೂಚನೆ ನೀಡಿದ್ದಾರೆ.

ಈ ಬಾರಿ ಮೈಸೂರಿನ ಅಧಿಕಾರಿಗಳನ್ನು ಹೊರಗಿಟ್ಟು, ಹೊರಗಿನ ಅಧಿಕಾರಿಗಳ ನೇತೃತ್ವದಲ್ಲಿ ಸರ್ವೇ ನಡೆಸಲು ತೀರ್ಮಾನಿಸಲಾಗಿದ್ದು, ಮಂಡ್ಯ ಭೂದಾಖಲೆಗಳ ಉಪ ನಿರ್ದೇಶಕರಾದ ಉಮೇಶ್, ತುಮಕೂರಿನ ಸುಜಯ್, ದಾವಣಗೆರೆಯ ಟಿ.ಕೆ.ಲೋಹಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.

ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ಈಗಾಗಲೇ ಒಂದು ಬಾರಿ ನಡೆಸಲಾಗಿತ್ತು. ಈ ವೇಳೆ ಅಕ್ರಮ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದರು. ಆದರೆ, ಈಗ ಮರು ಸರ್ವೆ ನಡೆಯಲಿದೆ. ದಟ್ಟಗಳ್ಳಿ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಯಾವ ಪ್ರದೇಶಗಳಲ್ಲಿ ಎಲ್ಲ ಆರೋಪ ಕೇಳಿ ಬಂದಿದೆಯೋ ಆ ಪ್ರದೇಶಗಳಲ್ಲಿ ಸರ್ವೇ ನಡೆಸಲು ಆದೇಶ ನೀಡಲಾಗಿದೆ.

ದಟ್ಟಗಳ್ಳಿಯ ಸಾ.ರಾ.ಚೌಲ್ಟ್ರಿಯ ಜಾಗವನ್ನೂ ಮರು ಸರ್ವೇ ಮಾಡಲಾಗುತ್ತಿದೆ ಎಂದು ಹೇಳಲಾಗಿದ್ದು, ರೋಹಿಣಿ ಸಿಂಧೂರಿ ಮಾಡಿದ್ದ ಆರೋಪಗಳಿಗೆ ಇದೀಗ ಮರುಜೀವ ದೊರೆತಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಇತ್ತೀಚಿನ ಸುದ್ದಿ