ಶಬರಿಮಲೆ ದೇವಸ್ಥಾನ ಇಂದು ಓಪನ್ | ಯಾತ್ರಿಕರು ಭೇಟಿ ನೀಡಬೇಕಾದರೆ ಇದು ಕಡ್ಡಾಯ
15/11/2020
ಪಥನಮತ್ತಟ್ಟ: ಕೊವಿಡ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನವು ಇಂದಿನಿಂದ ಆರಂಭಗೊಳ್ಳಲಿದೆ. ಇಂದು ದೇವಸ್ಥಾನ ಬಾಗಿಲು ತೆರೆಯಲಿದ್ದು, ನಾಳೆಯಿಂದ ಯಾತ್ರಿಕರು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಮೆಲ್ಶಾಂತಿ ಸುಧೀರ್ ನಂಬೂತಿರಿ, ದೇವಾಲಯದ ಅರ್ಚಕ ಕಾಂತರಾರ್ ರಾಜೀವ ಇಂದು ದೇವಸ್ಥಾನವನ್ನು ತೆರೆಯಲಿದ್ದಾರೆ. ಕೇರಳ ಸರ್ಕಾರದ ಬೃಹತ್ ಆದಾಯದ ಮೂಲವಾಗಿರುವ ಶಬರಿಮಲೆ ದೇವಸ್ಥಾನವು ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿತ್ತು. ಆ ಬಳಿಕ ಇದೀಗ ಮಕರ ಜ್ಯೋತಿ ಸಮೀಪಿಸುತ್ತಿರುವುದರಿಂದ ಯಾತ್ರಿಕರ ಆಗಮನದ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕೊವಿಡ್ ಮಾರ್ಗದರ್ಶಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸಬೇಕಾಗಿದೆ.
ಹೊಸ ನಿಯಮ ಪ್ರಕಾರ ಪಂಬಾ ಅಥವಾ ಸನ್ನಿಧನಂನಲ್ಲಿ ಯಾವುದೇ ಭಕ್ತರು ಉಳಿಯುವಂತಿಲ್ಲ. ಕೊವಿಡ್ 19 ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಯಾತ್ರೆಗೆ ಮುಂಚಿತವಾಗಿ ಬುಕ್ಕಿಂಗ್ ಮಾಡುವ 1000 ಜನರಿಗೆ ಮಾತ್ರವೇ ಬೆಟ್ಟ ಏರಲು ಅನುಮತಿ ಇದೆ.