ಪ್ರಥಮ: ಪಿಎಚ್ ಡಿ (ಡಾಕ್ಟರೇಟ್) ಪಡೆದು ದಾಖಲೆ ನಿರ್ಮಿಸಿದ ಲಕ್ಷದ್ವೀಪದ ಮೊದಲ ಮಹಿಳೆಯಾಗಿ ಡಾ.ಸಬೀನಾ
ಡಾಕ್ಟರೇಟ್ ಪದವಿಯನ್ನು ಪಡೆದ ಲಕ್ಷದ್ವೀಪದ ಮೊದಲ ಮಹಿಳೆಯಾಗಿ ಡಾಕ್ಟರ್ ಸಬೀನಾ ಇತಿಹಾಸ ಬರೆದಿದ್ದಾರೆ. Zonation patterns composition and diversity of micro community in the Lakshadweep Archipelago ಎಂಬ ವಿಷಯದ ಮೇಲೆ ಇವರು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭ್ಯವಾಗಿದೆ.
ಮೆರೆನ್ ಸೈನ್ಸ್ ನಲ್ಲಿ ಈಕೆ ಪದವಿ ಮತ್ತು ಮಾಸ್ಟರ್ ಪದವಿಯನ್ನು ಪಡೆದ ಬಳಿಕ 2014ರಲ್ಲಿ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. 20 16 ರಲ್ಲಿ ಅವರ ಪಿಎಚ್ಡಿ ಅಧ್ಯಯನ ಆರಂಭವಾಯಿತು.
ತನ್ನ ಪಿಎಚ್ ಡಿ ಥೀಸಿಸ್ ನ ಅಧ್ಯಯನಕ್ಕಾಗಿ ಈ ಸಬೀನಾ 12 ದ್ವೀಪಗಳಿಗೆ ಪ್ರಯಾಣಿಸಿದರು. ಇದರ ಜೊತೆಗೆ ಕೌಟುಂಬಿಕ ಜವಾಬ್ದಾರಿಯನ್ನೂ ಅವರು ನಿರ್ವಹಿಸಬೇಕಾಗಿತ್ತು. ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿಟ್ಟುಕೊಂಡೆ ಅವರು ಅಧ್ಯಯನ ಕೆಲಸಕ್ಕಾಗಿ ಕೊಚ್ಚಿಗೆ ತೆರಳಿದರು. ಅವರ ಪತಿಯ ಬೆಂಬಲ ಕೂಡ ಸ್ಮರಣೀಯ.
ಅಪರೂಪದ ವಿಷಯದ ಮೇಲೆ ಸಬೀನ ಅವರು ಕೈಗೊಂಡ ಅಧ್ಯಯನ ಮತ್ತು ಅವರು ಕಂಡುಕೊಂಡ ಸಂಶೋಧನೆಗೆ ತಜ್ಞರಿಂದ ಬಾರಿ ಶ್ಲಾಘನೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj