ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ - Mahanayaka

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

sdpi protest
09/09/2021

ಬಂಟ್ವಾಳ: ದೆಹಲಿಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಾಬಿಯಾ ಸೈಫ್ ಅವರ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಖಂಡಿಸಿದ ಸೋಶಿಯಲ್ ಡೆಮೋಕ್ರಟಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯು ಗುರವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ನ್ಯಾಯಕ್ಕಾಗಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ರಾಜ್ಯ ಮುಖಂಡ ಫಯಾಝ್ ದೊಡ್ಡಮನೆ, ರಾಷ್ಟ್ರದ ರಾಜಧಾನಿಯಲ್ಲಿಯೇ ಅತ್ಯಾಚಾರ, ಹತ್ಯೆ ನಡೆದಿರುವ ಸಂದರ್ಭದಲ್ಲಿ ಮನ್ಕಿ ಬಾತ್ ನಲ್ಲಾಗಲಿ, ಸಾರ್ವಜನಿಕವಾಗಿ ಯಾರು ಕೂಡ ಹೇಳಿಕೆ ನೀಡದೆ ಮೌನವಹಿಸಿರೋದು ದುರಾದೃಷ್ಟಕರ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಎನ್ ಆರ್ ಸಿ, ಎನ್ ಪಿ ಆರ್, ಸಿಎಎ , ರೈತರ ಹೋರಾಟ, ಸಾಬಿಯ ಸೈಫ್ ಬರ್ಬರ ಹತ್ಯೆ ಮತ್ತು ಅತ್ಯಾಚಾರ ವಿಚಾರದಲ್ಲಿ ಅಂತರ ಕಾಪಾಡಿದ್ದು, ಇದರಿಂದಾಗಿ ಅವರ ಜಾತ್ಯತೀತ ತತ್ವದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಮೆನ್ಸ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ  ಶಾಹಿದ ತಸ್ನಿಮ್ ಮಾತನಾಡಿ,  ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು, ಹಾಗೂ ಮಹಿಳೆಯರ ಸ್ವಯಂರಕ್ಷಣೆಗೆ ಆತ್ಮರಕ್ಷಣೆಯ ಕಲೆಯನ್ನು ಕರಗತ ಮಾಡಬೇಕೆಂದು ಕರೆ ನೀಡಿದರು.

ಸೋಶಿಯಲ್ ಡೆಮೋಕ್ರಟಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಅಧ್ಯಕ್ಷರಾದ ಯೂಸುಫ್ ಅಲಡ್ಕ ಅವರ ಅಧ್ಯಕ್ಷತೆಯಲ್ಲಿ ಈ ಹಕ್ಕೊತ್ತಾಯ ನಡೆಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಐ ಎಂ ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಎಚ್, ಕ್ಷೇತ್ರ ಉಪಾಧ್ಯಕ್ಷರಾದ ಉಬೈದ್ ಬಂಟ್ವಾಳ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು, ಪುರಸಭಾ ಸದಸ್ಯರಾದ ಮುನಿಶ್ ಅಲಿ, ಇದ್ರಿಶ್ ಪಿ.ಜೆ. ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಸದಸ್ಯರಾದ ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಇನ್ನಷ್ಟು ಸುದ್ದಿಗಳು…

ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ

ಪೊಲೀಸ್ ಅಧಿಕಾರಿಯ ಜೇಬಿಗೆ ಕೈ ಹಾಕಿ ಚಿನ್ನದ ಬಳೆ ಕದ್ದ ಕಳ್ಳ!

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಫಲವನ್ನು ಇವರೆಲ್ಲ ಉಣ್ಣುತ್ತಾರೆ ನೋಡಿ | ಕೋಡಿ ಶ್ರೀಗಳಿಂದ ಸಸ್ಪೆನ್ಸ್, ಥ್ರಿಲ್ಲರ್ ಭವಿಷ್ಯ!

ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!

ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! |  ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ

ದಂಪತಿಯನ್ನು ಅಡ್ಡಗಟ್ಟಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಿನ್ನಾಭರಣ ದೋಚಿದ ದರೋಡೆಕೋರರು

ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!

ಇತ್ತೀಚಿನ ಸುದ್ದಿ