ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು! - Mahanayaka
12:14 PM Wednesday 5 - February 2025

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

sabia saifi
05/09/2021

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಹೆಣ್ಣುಮಗಳೊಬ್ಬಳ ಹೆಸರು ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಡಿಫೆನ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಬಿಯಾ ಸೈಫಿ(ಹೆಸರು ಬದಲಿಸಲಾಗಿದೆ) ಅವರನ್ನು ಸಾಮೂಹಿಕ ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕರ್ತವ್ಯಕ್ಕೆ ತೆರಳಿದ್ದ ಸಬಿಯಾ ಆಗಸ್ಟ್ 27ರಂದು ತಮ್ಮ ಮನೆಗೆ ಹಿಂದುರುಗಲಿಲ್ಲ. ಈ ವೇಳೆ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ.

ಸಬಿಯಾ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಅಲ್ಲಿಯೂ ಅವರು ಇಲ್ಲ ಎನ್ನುವುದು ತಿಳಿದು ಬಂದಿತ್ತು. ಇದರಿಂದಾಗಿ ಕುಟುಂಬಸ್ಥರು ತೀವ್ರವಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಅವರ ಮೃತದೇಹ ಹರ್ಯಾಣದ ಫರಿದಾಬಾದ್ ನಲ್ಲಿ ಪತ್ತೆಯಾಗಿತ್ತು. ಆದರೆ, ಅವರ ಮೃತದೇಹ ಮಾತ್ರ ಅತ್ಯಂತ ಭೀಕರ ಸ್ಥಿತಿಯಲ್ಲಿತ್ತು ಎಂದು ಸಬಿಯಾ ಅವರ ಸಹೋದರ ಹೇಳಿದ್ದಾರೆ.

ಕೆಲಸಕ್ಕೆ ಸೇರ್ಪಡೆಗೊಂಡು ಕೇವಲ 4 ತಿಂಗಳುಗಳಲ್ಲೇ ಸಬಿಯಾ ಅವರನ್ನು ಗುಂಪೊಂದು ಅಪಹರಣ ಮಾಡಿ, ಸಾಮೂಹಿಕ ಅತ್ಯಾಚಾರ ನಡೆಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ವೈರಲ್ ಆಗುತ್ತಿವೆ. ಸಬಿಯಾ ಅವರ ಕುಟುಂಬಸ್ಥರು ಸಹ ಇದೇ ಆರೋಪವನ್ನು ಮಾಡಿದ್ದಾರೆ. ಸಬಿಯಾ ಅವರ ಮೃತದೇಹದ  ಮೇಲೆ 50 ಭಾಗಗಳಲ್ಲಿ ಚೂರಿಯಿಂದ ಭೀಕರವಾಗಿ ಇರಿಯಲಾಗಿದೆ. ಎದೆಯನ್ನು ಕತ್ತರಿಸಲಾಗಿದೆ. ಮರ್ಮಾಂಗವನ್ನು ಚೂರಿಯಿಂದ ಸೀಳಲಾಗಿದೆ.  ಕುತ್ತಿಗೆ ಸೇರಿದಂತೆ ವಿವಿಧ ಭಾಗಗಳಿಗೆ ಚೂರಿಯಿಂದ ಇರಿದು ಭಯಂಕರವಾದ ಚಿತ್ರ ಹಿಂಸೆಯನ್ನು ನೀಡಲಾಗಿದೆ ಎಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನೂ ಸಬಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬಿಯಾ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿದ್ದು, ಹರಿತವಾದ ಆಯುಧದಿಂದ ಇರಿದ ಪರಿಣಾಮವಾಗಿ  ಅವರ ದೇಹದಿಂದ ತೀವ್ರ ರಕ್ತಸ್ರಾವವಾಗಿದ್ದು, ಈ ಕಾರಣದಿಂದಾಗಿ ಅವರ ಮರಣ ಸಂಭವಿಸಿದೆ ಎಂದು ವರದಿ ಹೇಳಿದೆ.

ಈ ಪ್ರಕರಣದಲ್ಲಿ ನಿಜಾಮುದ್ದೀನ್ ಎಂಬಾತ ಪೊಲೀಸರಿಗೆ ಶರಣಾಗಿದ್ದು, ನಾನು ಮತ್ತು ಸಬಿಯಾ ರಹಸ್ಯವಾಗಿ ಮದುವೆಯಾಗಿದ್ದೇವೆ. ಆದರೆ, ಆಕೆಯ ನಡತೆ ಸರಿ ಇರಲಿಲ್ಲ. ಈ ವಿಚಾರವಾಗಿ ನನಗೂ ಆಕೆಗೂ ಗಲಾಟೆ ನಡೆದಿತ್ತು. ಘಟನೆ ದಿನ ನಾನು ಆಕೆಯನ್ನು ಸ್ಕೂಟರ್ ನಲ್ಲಿ ಕರೆದೊಯ್ದಿದ್ದೆ. ಆದರೆ, ನಡುವೆ ವಾಗ್ವಾದ ನಡೆದಿದ್ದು, ಹೀಗಾಗಿ  ನಾನು ಆಕೆಗೆ ಕತ್ತಿಯಿಂದ ಚುಚ್ಚಿ ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ.

ನಿಜಾಮುದ್ದೀನ್ ಹೇಳಿಕೆಯನ್ನು ಸಬಿಯಾ ಕುಟುಂಬಸ್ಥರು ಒಪ್ಪಿಲ್ಲ. ಆಕೆಗೆ ಮದುವೆಯಾಗಿದೆ ಎಂಬ ಬಗ್ಗೆಯಾಗಲಿ, ನಿಜಾಮುದ್ದೀನ್ ಎಂಬ ವ್ಯಕ್ತಿಯನ್ನಾಗಲಿ ನಾವು ಈವರೆಗೆ ಕೇಳಿಯೇ ಇಲ್ಲ. ಈ ಪ್ರಕರಣದಲ್ಲಿ ಇನ್ನೇನೋ ಇದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯ ಸಬಿಯಾ ಪ್ರಕರಣಕ್ಕೆ ಹಲವು ಸಾಮಾಜಿಕ ಸಂಘಟನೆಗಳು ಕೂಡ ಕೈಜೋಡಿಸಿದೆ. ಹಲವಾರು ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವ್ಯಾಪಕವಾಗಿ ಚರ್ಚೆಗೀಡಾಗುತ್ತಿವೆ. ಇನ್ನೊಂದು ಬಹುಮುಖ್ಯ ವಿಚಾರ ಎಂದರೆ, ಸುದ್ದಿ ಪ್ರಮುಖ ಮಾಧ್ಯಮಗಳಲ್ಲಿಯೇ ಮಹತ್ವ ಪಡೆದುಕೊಂಡಿಲ್ಲ. ಡಿಫೆನ್ಸ್ ಆಫೀಸರ್ ಒಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಬಗ್ಗೆಯೂ ಅನುಮಾನಗಳು ದಟ್ಟವಾಗಿವೆ. ಇಂತಹ ಸುದ್ದಿ ದೇಶದಲ್ಲಿ ಪ್ರಾಮುಖ್ಯತೆ ಪಡೆಯದಿರುವುದು ಈ ದೇಶದ ದುರಂತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಅನುಮಾನಗಳೇನು?

ಸಬಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜಾಮುದ್ದೀನ್ ಎಂಬಾತ ತಪ್ಪೊಪ್ಪಿ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ, ಪ್ರಭಾವಿಗಳನ್ನು ಉಳಿಸುವುದಕ್ಕಾಗಿ ಈತನನ್ನು ಬಳಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಸಬಿಯಾಗೆ ಮದುವೆಯಾಗಿಲ್ಲ. ಆದರೆ, ತಾನು ಆಕೆಯನ್ನು ಮದುವೆಯಾಗಿದ್ದೇನೆ ಎಂದು ವ್ಯಕ್ತಿ ಸುಳ್ಳು ಹೇಳುವ ಮೂಲಕ ಈ ಪ್ರಕರಣವನ್ನು ದಾರಿ ತಪ್ಪಿಸಲು ನಿಜಾಮುದ್ದೀನ್ ಪ್ರಯತ್ನಿಸುತ್ತಿದ್ದಾನೆ. ಹೀಗಾಗಿಯೇ ಈ ಪ್ರಕರಣ ಬಹಳಷ್ಟು ಆಳವಾಗಿದೆ. ಹಾಗಾಗಿ ಪ್ರತಿಯೊಂದಕ್ಕೂ ಉತ್ತರ ಸಿಗಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಒತ್ತಾಯ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಎರಡು ವರ್ಷ ವಯಸ್ಸಿನ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿಗಳಿಂದ ದಾಳಿ!

ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ

ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ

ಇತ್ತೀಚಿನ ಸುದ್ದಿ