ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್: ನಾಳೆ ಸಂಜೆ ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ - Mahanayaka

ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್: ನಾಳೆ ಸಂಜೆ ಹೊಸ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

basava raj bommai
03/08/2021

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯದ ಮಾಹಿತಿಗಳ ಪ್ರಕಾರ ನಾಳೆ ಸಂಜೆ 5 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಹಂತಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ. ಹಳೆಯ ಸಚಿವರುಗಳಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮಾಹಿತಿಗಳ ಪ್ರಕಾರ, ಸತೀಶ್ ರೆಡ್ದಿ, ಸುನೀಲ್ ಕುಮಾರ್, ಅಭಯ್ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ಅರವಿಂದ್ ಬೆಲ್ಲದ್, ಮುನಿರತ್ನ, ಬಿ.ವೈ.ವಿಜಯೇಂದ್ರ, ದತ್ತಾತ್ರೆಯ ಪಾಟೀಲ್ ಸೇರಿದಂತೆ 24 ಶಾಸಕರು ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ನಾಳೆ ಸಂಜೆ 5 ಗಂಟೆಗೆ ಎಲ್ಲ ಕುತೂಹಲಗಳಿಗೂ ತೆರೆ ಬೀಳಲಿದೆ.

ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ವಿ.ಸೋಮಣ್ಣ, ಪ್ರಭು ಚೌವ್ಹಾಣ್, ಸಿ.ಸಿ.ಪಾಟೀಲ್, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

 

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

ಕೊರೊನಾ 3ನೇ ಅಲೆ ಭೀತಿ:  ಇಂದು ರಾತ್ರಿ 10ರಿಂದ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ

ಪ್ರೀತಿಸಿಲು ನಿರಾಕರಿಸಿದ ಬಾಲಕಿಯನ್ನು ದಾರಿ ಮಧ್ಯೆ ತಡೆದು ಯುವಕನಿಂದ ಘೋರ ಕೃತ್ಯ!

ಕೇರಳ-ಪುತ್ತೂರು ಅಧಿಕೃತ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗೆ ಮಣ್ಣು ಹಾಕಿ ಮುಚ್ಚಲು ಶಾಸಕರಿಂದ ಸೂಚನೆ

“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್

ಇತ್ತೀಚಿನ ಸುದ್ದಿ